ನೆಟ್‌ ವರ್ಕ್‌ ಸಿಗದೆ ಸಮಸ್ಯೆ ಎದುರಿಸಿದ ರಿಲಯನ್ಸ್‌ ಜಿಯೊ ಬಳಕೆದಾರರು! - Mahanayaka
11:49 PM Tuesday 16 - December 2025

ನೆಟ್‌ ವರ್ಕ್‌ ಸಿಗದೆ ಸಮಸ್ಯೆ ಎದುರಿಸಿದ ರಿಲಯನ್ಸ್‌ ಜಿಯೊ ಬಳಕೆದಾರರು!

jio
17/09/2024

ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ದೇಶದಾದ್ಯಂತ ರಿಲಯನ್ಸ್‌ ಜಿಯೊ ಬಳಕೆದಾರರು ನೆಟ್‌ವರ್ಕ್‌ ಸಿಗದೆ ಸಮಸ್ಯೆ ಅನುಭವಿಸಿದರು.

ಕಂಪನಿಯ ಬಳಕೆದಾರರ ಪೈಕಿ ಅರ್ಧಕ್ಕೂ ಹೆಚ್ಚು ಗ್ರಾಹಕರು ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌, ಬ್ರಾಡ್‌ ಬ್ಯಾಂಡ್‌ ಸೇವೆಯಲ್ಲಿ ವ್ಯತ್ಯಯ ಅನುಭವಿಸಿದ್ದಾರೆ.

10 ಸಾವಿರಕ್ಕೂ ಹೆಚ್ಚು ಬಳಕೆದಾರರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಕೆಲವು ತಾಂತ್ರಿಕ ಅಡಚಣೆಯಿಂದ ಗ್ರಾಹಕರು ತೊಂದರೆ ಅನುಭವಿಸಿದ್ದಾರೆ. ಇದಕ್ಕೆ ಬಳಕೆದಾರರಲ್ಲಿ ಕ್ಷಮೆಯಾಚಿಸುತ್ತೇವೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ನಮ್ಮ ನೆಟ್‌ವರ್ಕ್‌ನಲ್ಲಿ ಇಂತಹ ಯಾವುದೇ ಅಡಚಣೆ ತಲೆದೋರಿಲ್ಲ ಎಂದು ಭಾರ್ತಿ ಏರ್‌ ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿ ತಿಳಿಸಿವೆ.

ಜೂನ್‌ ಅಂತ್ಯದ ವೇಳೆಗೆ ಜಿಯೊ ಬಳಕೆದಾರರ ಸಂಖ್ಯೆ 48.9 ಕೋಟಿ ಇದೆ. ಭಾರ್ತಿ ಏರ್‌ಟೆಲ್‌ 28 ಕೋಟಿ ಮತ್ತು ವೊಡಾಫೋನ್‌ ಐಡಿಯಾದ 12.8 ಕೋಟಿ ಬಳಕೆದಾರರಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಂಕಿ-ಅಂಶಗಳು ತಿಳಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ