ಕನ್ನಡದ ಹೆಸರಾಂತ ಕಿರುತೆರೆ ನಿರ್ದೇಶಕ ಸಾವಿಗೆ ಶರಣು!

ಬೆಂಗಳೂರು: ಕನ್ನಡದ ಹೆಸರಾಂತ ಕಿರುತೆರೆ ನಿರ್ದೇಶಕ ವಿನೋದ್ ದೊಂಡಾಲೆ ಅವರು ನೇಣು ಬಿಗಿದು ಸಾವಿಗೆ ಶರಣಾಗಿರುವ ಘಟನೆ ನಗರಬಾವಿಯಲ್ಲಿರುವ ಅವರ ನಿವಾಸದಲ್ಲಿ ನಡೆದಿದೆ.
ʻಕರಿಮಣಿʼ, ʻಶಾಂತಂ ಪಾಪಂʼ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಸದ್ಯ ನಿನಾಸಮ್ ಸತೀಶ್ ನಟನೆಯ ʻಅಶೋಕ ಬ್ಲೇಡ್ʼ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈ ಚಿತ್ರದ ಶೂಟಿಂಗ್ ಶೇ.90ರಷ್ಟು ಚಿತ್ರೀಕರಣ ನಡೆದಿದೆ ಎನ್ನಲಾಗಿದೆ.
ಇನ್ನೂ ಮುಂದಿನ ಹಂತದ ಶೂಟಿಂಗ್ ಬಗ್ಗೆಯೂ ವಿನೋದ್ ನೀನಾಸಂ ಸತೀಶ್ ಜೊತೆಗೆ ನಿನ್ನೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಆದರೆ ಇದೀಗ ಅವರ ಸಾವಿನ ಸುದ್ದಿ ಶಾಕ್ ನೀಡಿದೆ. ವಿನೋದ್ ಅವರು ಅತಿಥಿ, ಬೇರು,ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97