“ಒಲವಿನ ಉಡುಗೊರೆ ಕೊಡಲೇನು, ಹಿಂದೂಸ್ತಾನವು ಎಂದೂ ಮರೆಯದ ಹಾಡಿನ ಖ್ಯಾತ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ - Mahanayaka
6:40 AM Thursday 18 - September 2025

“ಒಲವಿನ ಉಡುಗೊರೆ ಕೊಡಲೇನು, ಹಿಂದೂಸ್ತಾನವು ಎಂದೂ ಮರೆಯದ ಹಾಡಿನ ಖ್ಯಾತ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ

p jayachandran
10/01/2025

ತಿರುವನಂತಪುರಂ:  “ಒಲವಿನ ಉಡುಗೊರೆ ಕೊಡಲೇನು” ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡಿದ್ದ ಖ್ಯಾತ ಗಾಯಕ ಪಿ.ಜಯಚಂದ್ರನ್ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.


Provided by

ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಇವರು ಸುಮಾರು 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಇವರೂ ಒಬ್ಬರಾಗಿದ್ದರು. ಇವರು ಹಾಡಿರುವ ಹಾಡುಗಳು ಇಂದಿಗೂ ಜನರಿಗೆ ಚಿರಪರಿಚಿತ ಗೀತೆಗಳಾಗಿವೆ.

ಮಂದಾರ ಪುಷ್ಪವು ನೀನು, ಭೂಮಿ ತಾಯಾಣೆ ನೀ ಇಷ್ಟ ಕಣೆ, ಹಿಂದೂಸ್ತಾನವು ಎಂದೂ ಮರೆಯದ, ಕನ್ನಡ ನಾಡಿನ ಕರಾವಳಿ, ನನ್ನವರು ಯಾರೂ ಇಲ್ಲ ಮೊದಲಾದ ಕನ್ನಡ ಸುಪ್ರಸಿದ್ದ ಹಾಡುಗಳನ್ನು ಹಾಡಿ ಜನಪ್ರಿಯತೆ ಪಡೆದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ