ಚಂದ್ರು ಸಾವಿನ ಬಗ್ಗೆ ಸಿದ್ದರಾಮಯ್ಯ ಬಳಿ ಬೇಸರ ತೋಡಿಕೊಂಡ ರೇಣುಕಾಚಾರ್ಯ! - Mahanayaka

ಚಂದ್ರು ಸಾವಿನ ಬಗ್ಗೆ ಸಿದ್ದರಾಮಯ್ಯ ಬಳಿ ಬೇಸರ ತೋಡಿಕೊಂಡ ರೇಣುಕಾಚಾರ್ಯ!

renukacharya
22/12/2022

ಬಿಜೆಪಿ ನಾಯಕ ರೇಣುಕಾಚಾರ್ಯ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಿ ಚಂದ್ರು ಸಾವಿನ ಕುರಿತು ಸರಿಯಾಗಿ ತನಿಖೆಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಿಎಂ ಸಿದ್ದರಾಮಯ್ಯನವರ ಭೇಟಿಯ ವೇಳೆ ಚಂದ್ರು ಸಾವಿನ ಬಗ್ಗೆ ಪ್ರಸ್ತಾಪವಾಗಿದೆ. ಈ ವೇಳೆ ಚಂದ್ರುನ ಮೃತದೇಹ ಯಾವ ರೀತಿಯಾಗಿತ್ತು, ಮತ್ತು ಆತನ ಸಾವಿನ ಬಗ್ಗೆ ಇರುವ ಅನುಮಾನಗಳ ಬಗ್ಗೆ ರೇಣುಕಾಚಾರ್ಯ ಸಿದ್ದರಾಮಯ್ಯನವರಿಗೆ ವಿವರಿಸಿದ್ದಾರೆ.

ಈ ವೇಳೆ ಸಿದ್ದರಾಮಯ್ಯನವರು, ನಿನ್ನ ಕಥೆನೇ ಹೀಗಾದ್ರೆ, ಇನ್ನು ಬೇರೆಯವರ ಕಥೆ ಹೇಗಯ್ಯ? ಎಂದು ಪ್ರಶ್ನಿಸಿದ್ದಾರೆ. ನೀನು ಸಿಎಂನ ಕಾರ್ಯದರ್ಶಿಯಾಗಿದ್ದವ, ನಿನ್ನ ಕಥೆನೇ ಹೀಗಾಯ್ತಲ್ಲಯ್ಯ ಎಂದ ಸಿದ್ದರಾಮಯ್ಯ ಬಳಿಕ, ರೇಣುಕಾಚಾರ್ಯ ಅವರನ್ನು ಸಮಾಧಾನ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ