ಒಳ್ಳೆ ಜಮೀರ್ ಆಡಿದಂಗೆ ಆಡ್ತಿಯಲ್ಲೋ: ರೇಣುಕಾಚಾರ್ಯಗೆ ಚುಚ್ಚಿದ ಯಡಿಯೂರಪ್ಪ - Mahanayaka

ಒಳ್ಳೆ ಜಮೀರ್ ಆಡಿದಂಗೆ ಆಡ್ತಿಯಲ್ಲೋ: ರೇಣುಕಾಚಾರ್ಯಗೆ ಚುಚ್ಚಿದ ಯಡಿಯೂರಪ್ಪ

yediyurappa
17/02/2022


Provided by

ಬೆಂಗಳೂರು: ಶಾಸಕ ರೇಣುಕಾಚಾರ್ಯಗೆ ಮಾಜಿ ಸಿಎಂ ಯಡಿಯೂರಪ್ಪನವರು ಮಾತಿನಿಂದಲೇ ತಿವಿದು ಕಿಚಾಯಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.

ಬುಧವಾರದ ಕಲಾಪದ ನಡುವೆ ಯಡಿಯೂರಪ್ಪನವರಿಗೆ  ಎಲ್ಲ ಬಿಜೆಪಿ ಶಾಸಕರು ನಮಸ್ಕರಿಸಿ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ರೇಣುಕಾಚಾರ್ಯ ಕೂಡ ಬಂದಿದ್ದು, ಯಡಿಯೂರಪ್ಪನವರಿಗೆ ನಮಸ್ಕರಿಸಿದ್ದಾರೆ.

ರೇಣುಕಾಚಾರ್ಯ ಅವರನ್ನು ನೋಡುತ್ತಿದ್ದಂತೆಯೇ, ಯಡಿಯೂರಪ್ಪನವರು ಬಹಳ ಆತ್ಮೀಯತೆಯಿಂದಲೇ ಮಾತನಾಡಿಸುತ್ತಾ, “ಏನೋ ನೀನು, ಒಳ್ಳೆ ಜಮೀರ್ ಆಡಿದಂಗೆ ಆಡ್ತಿಯಲ್ಲೋ…” ಚುಚ್ಚಿದ್ದಾರೆ.

ಯಡಿಯೂರಪ್ಪನವರ ಮಾತಿಗೆ ಏನೂ ಪ್ರತಿಕ್ರಿಯೆ ನೀಡದ ರೇಣುಕಾಚಾರ್ಯ ನಗುತ್ತಲೇ ಪಕ್ಕಕ್ಕೆ ಬಂದು ನಿಂತುಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಚಿವ ಈಶ್ವರಪ್ಪ ಒಬ್ಬ ಅವಿವೇಕಿ; ಮನೋಹರ್‌

ಫೆ. 19ರಂದು ಬಳ್ಳಾಜೆ-ಕೊಳವೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಆಫ್‍ಲೈನ್ ತರಗತಿಗೆ ಹೋಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಸರ್ಕಾರಿ ನೌಕರನ ಎರಡನೇ ಪತ್ನಿಗೆ ಪಿಂಚಣಿ ಇಲ್ಲ | ಬಾಂಬೆ ಹೈಕೋರ್ಟ್

ಇತ್ತೀಚಿನ ಸುದ್ದಿ