ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿ ಅಲ್ಲ, ಆತ ಪವಿತ್ರಾಗೆ ಕಿರುಕುಳ ನೀಡಿದ್ದಾನೆ: ತೆಲುಗು ನಟಿ ಹೇಳಿದ್ದೇನು? - Mahanayaka

ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿ ಅಲ್ಲ, ಆತ ಪವಿತ್ರಾಗೆ ಕಿರುಕುಳ ನೀಡಿದ್ದಾನೆ: ತೆಲುಗು ನಟಿ ಹೇಳಿದ್ದೇನು?

kasturi shankar
16/06/2024


Provided by

ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಮಾಡುತ್ತಾ ಕಿರುಕುಳ ನೀಡುತ್ತಿದ್ದ ರೇಣುಕಾಸ್ವಾಮಿ ಎಂಬಾತ ನಟ ದರ್ಶನ್  ಹಾಗೂ ಗ್ಯಾಂಗ್ ನ ಆಕ್ರೋಶಕ್ಕೆ ಬಲಿಯಾಗಿದ್ದಾನೆ. ದರ್ಶನ್ ಸ್ಟಾರ್ ನಟ ಆಗಿರೋದ್ರಿಂದ ಈ ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗಿದೆ. ಮುಚ್ಚಿಹೋಗುತ್ತಿದ್ದ ಪ್ರಕರಣವೊಂದನ್ನು ಚಾಣಾಕ್ಷ್ಯತನದಿಂದ ಪತ್ತೆ ಹಚ್ಚಿದ ಪೊಲೀಸರು ಈ ಪ್ರಕರಣವನ್ನು ಎಲ್ಲ ಕೊಲೆ ಪ್ರಕರಣಗಳನ್ನು ತನಿಖೆ ನಡೆಸುವಂತೆಯೇ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ನಟ ದರ್ಶನ್ ಪ್ರಕರಣವಂತೂ ಸುದ್ದಿವಾಹಿನಿಗಳಲ್ಲಿ ಅತಿರಂಜನೀಯವಾಗಿ ಮೂಡಿ ಬರುತ್ತಿದೆ. ಒಂದು ಹಂತದಲ್ಲಿ ನಟ ದರ್ಶನ್ ಅಭಿಮಾನಿಗಳು ಹಾಗೂ ಸುದ್ದಿವಾಹಿನಿಗಳ ಆ್ಯಂಕರ್ ಗಳ ನಡುವೆ ಭಾರೀ ವಾದ ವಿವಾದಗಳು ನಡೆಯುತ್ತಿವೆ. ಈ ನಡುವೆ ತೆಲುಗು ನಟಿಯೊಬ್ಬರು ನಟ ದರ್ಶನ್ ಪ್ರಕರಣದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಟಾಲಿವುಡ್​ ನಟಿ ಕಸ್ತೂರಿ ಶಂಕರ್, ಅವರು ನಾನು ಯಾವುದೇ ಹಿಂಸಾಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಆದರೆ, ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿ ಅಲ್ಲ. ಆಕೆಗೆ ಕಿರುಕುಳ ನೀಡಿದ್ದಾನೆ. ಅವನ ಕೆಲಸ ಏನು? ಅವನಿಗೆ ಯಾಕೆ ಬೇಕಿತ್ತು ಮೆಸೇಜ್​ ಮಾಡುವ ಕೆಲಸ ಅಂತ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ ಮಾಡುತ್ತಿದ್ದಾನೆ ಅಲ್ವ. ಹಾಗಿದ್ದ ಮೇಲೆ ಪೊಲೀಸ್​ ಇದ್ದಾರೆ, ಕೋರ್ಟ್​ ಇದೆ. ಖಾಸಗಿ ಜೀವನದಲ್ಲಿ ತೊಂದರೆ ಆದಾಗ ಮೊದಲ ಪತ್ನಿ ಇದ್ದಾರೆ. ಇದು ಅವರ ಕೆಲಸ. ಒಬ್ಬ ಸೆಲಬ್ರಿಟಿಗೆ ಮೆಸೇಜ್​ ಮಾಡಿ ಕಿರುಕುಳ ನೀಡುವ ಹಕ್ಕನ್ನು ಪಬ್ಲಿಕ್ ​ಗೆ ಯಾರು ಕೊಟ್ಟವರು ಎಂದು ಪ್ರಶ್ನಿಸಿದ್ದಾರೆ.

ದರ್ಶನ್​ ಕೇಸ್​ ಇದಕ್ಕೆ ಹತ್ತಿರವಾಗಿದೆ. ಯಾಕಂದ್ರೆ ಆತ ಕೋಪಿಷ್ಠ ಮತ್ತು ಅವರ ಅಭಿಮಾನಿಗಳು ರೇಣುಕಾಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು. ಆದರೆ ಆತನ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿಯರಿಗೆ ಅಸಭ್ಯ ಕಾಮೆಂಟ್  ಹಾಕುವುದನ್ನು ವಿರೋಧಿಸಿದ ಅವರು, ಮಹಿಳೆಯರಿಗೆ ಕಿರುಕುಳ ನೀಡುವ ಹಕ್ಕು ಇವರಿಗೆ ಯಾರು ಕೊಟ್ಟವರು ಎಂದು ಪ್ರಶ್ನಿಸಿದರು.

ಕಳೆದ ಬಾರಿ ರಶ್ಮಿಕಾ ಮಂದಣ್ಣ ಅವರ ಫೇಕ್ ಎಐ ವಿಡಿಯೋ ಕ್ರಿಯೇಟ್ ಮಾಡಿ ವೈರಲ್ ಮಾಡಿ ಕಿರುಕುಳ ನೀಡಲಾಗಿತ್ತು ಎಂದು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ