ಹೊಸ ರಸ್ತೆಯನ್ನು ಕೇಬಲ್ ಅಳವಡಿಕೆಗೆ ಅಗೆದ ಪ್ರತಿಷ್ಠಿತ ಕಂಪನಿ: ಸಾರ್ವಜನಿಕರಿಂದ ಪ್ರತಿಭಟನೆ - Mahanayaka
12:11 PM Saturday 18 - October 2025

ಹೊಸ ರಸ್ತೆಯನ್ನು ಕೇಬಲ್ ಅಳವಡಿಕೆಗೆ ಅಗೆದ ಪ್ರತಿಷ್ಠಿತ ಕಂಪನಿ: ಸಾರ್ವಜನಿಕರಿಂದ ಪ್ರತಿಭಟನೆ

bidar protest
02/08/2024

ಔರಾದ್: ಬೀದರ್–ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಅಗೆದು ಕೇಬಲ್ ಕಾಮಗಾರಿ ಮಾಡಲಾಗುತ್ತಿದೆ  ಎಂದು ಬುಧವಾರ ನಾನಾ ಸಂಘಟನೆಗಳ‌ ಪದಾಧಿಕಾರಿಗಳು ದಿಢೀರ್ ಮಿಂಚಿನ ಪ್ರತಿಭಟನೆ ನಡೆಸಿದರು.


Provided by

ಈ ವೇಳೆ‌ ಮಾತನಾಡಿದ ಕಾರ್ಯಕರ್ತರು, ಪ್ರತಿಷ್ಠಿತ ಕಂಪನಿಯೊಂದರ ಸಿಸಿ‌ ಕ್ಯಾಮರಾ  ಕೇಬಲ್‌ ಅಳವಡಿಕೆಯ ನಿಯಮ ಬಾಹಿರ ನಡೆಯುತ್ತಿದೆ. ಸಂಚಾರಕ್ಕೆ ಕಿರಿಕಿರಿ ಉಂಟಾಗಿದೆ ಎಂದು ದೂರಿದರು. ಕೇಂದ್ರ ಸರಕಾರದ ಟೆಂಡರಿನಂತೆ ಔರಾದ್ — ಬೀದರ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲಿ  ಸಿಸಿ ಕ್ಯಾಮರಾಗಳ ಅಳವಡಿಕೆಯನ್ನು ಪ್ರತಿಷ್ಟಿತ ಕಂಪನಿಯೊಂದು ಕೈಗೆತ್ತಿಕೊಂಡಿದೆ. ಆದರೆ ಇತ್ತಿಚೇಗಷ್ಟೆ ನಿರ್ಮಾಣವಾದ ರಸ್ತೆಯನ್ನು ನಿಯಮ ಬಾಹಿರವಾಗಿ ಒಡೆಯುತ್ತಿದೆ ಎಂದು ಸ್ಥಳೀಯ ಸಾರ್ವಜನಿಕರು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ  ಗುರುವಾರ ದೂರು ಸಲ್ಲಿಸಿದರು.

ಅಲ್ಲದೇ ಸ್ಥಳದಲ್ಲಿಯೇ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಿಂಚಿನ‌ ಪ್ರತಿಭಟನೆ ನಡೆಸಿದರು. ಇದರಿಂದಲೇ ಸ್ಥಳಕ್ಕೆ ಆಗಮಿಸಿದ ಪಪಂ‌ ಮುಖ್ಯಾಧಿಕಾರಿ ಸ್ವಾಮಿದಾಸ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿಯ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಇಂಜಿನಿಯರ್ ಅವರಿಗೆ ಬರುವಂತೆ ತಿಳಿಸಿದರು. ಹೆದ್ದಾರಿ ರಸ್ತೆ ಕಾಮಗಾರಿಯಾಗಿ ಕೆಲ‌ ತಿಂಗಳು ಆಗಿಲ್ಲ. ರೀತಿ ಪಟ್ಟಣದಲ್ಲಿ ರಸ್ತೆ ಅಗೆದರೇ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯ ಕಾಮಗಾರಿ ನಿಯಮ ಬಾಹಿರವಾಗಿದೆ ಎಂದು ಮೇಲ್ನೋಟ ಕಂಡು ಬರುತ್ತಿದೆ ಎಂದು ದೂರಿದರು.

ಕಾಮಗಾರಿಯ ಮಾಹಿತಿ ನೀಡುವಂತೆ ಸ್ಥಳದಲ್ಲಿರುವ ಸಿಬ್ಬಂದಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಿಬ್ಬಂದಿಗಳು ನಮ್ಮ‌ ಬಳಿಯಲ್ಲಿ ಯಾವುದೇ ದಾಖಲೆಗಳಿಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಕಾಮಗಾರಿಯ ಟ್ರಾಕ್ಟರ್ ಹಾಗೂ ಕೇಬಲ್ ವಶ ಪಡಿಸಿಕೊಂಡು ಎಲ್ಲ ದಾಖಲೆಗಳು ತರುವಂತೆ ಸೂಚಿಸಿದರು. ನಂತರ ಸ್ಥಳಕ್ಕೆ ಇಂಜಿನಿಯರಯೊಬ್ಬರು ಆಗಮಿಸಿ ಕಾಮಗಾರಿಯ ಬಗ್ಗೆ ಹೇಳುತ್ತಿದಂತೆ ನನಗೆ ಮಾತುಗಳು ಆಗಬೇಡಿ ದಾಖಲೆಗಳು ನೀಡುವಂತೆ ಪಪಂ‌ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದರು. ರಸ್ತೆಯ ಸೋಲ್ಡರ್ ಹೊಡೆಯಲು ನಿಮಗೆ ಯಾರು ಅನುಮತಿ ನೀಡಿದ್ದಾರೆ ಎಂದು ತರಾಟೆ ತೆಗೆದುಕೊಂಡರು. ಅಗೆದ ರಸ್ತೆ ಮತ್ತು ಗುಣಮ್ಟದ ರಸ್ತೆ ನಿರ್ಮಾಣ ಮಾಡುಲು ನಿಮ್ಮಿಂದ ಸಾಧ್ಯವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ರಸ್ತೆ ಮಾಡುವಂತಿಲ್ಲ. ಎಲ್ಲ ದಾಖಲೆಗಳು ಇಲಾಖೆ ನೀಡುವಂತೆ ಸೂಚಿಸಿದರು. ಈ ವೇಳೆ ಹೋರಾಟಗಾರ ತುಕಾರಾಮ ಹಸನ್ಮುಖಿ, ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ, ಪ್ರಕಾಶ ಕಾಂಬಳೆ, ಅಭಿಷೇಕ ಮಾನಕಾರೆ, ರೋಹಿತ ಕಾಂಬಳೆ, ಧಮ್ಮದೀಪ ಕೋಕಲೆ, ಸುಧಾಕಾರ ಚವ್ಹಾಣ ಸೇರಿದಂತೆ ಅನೇಕರಿದ್ದರು.

ನಿಯಮ ಬಾಹಿರವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಾಢವಾದ ನಿದ್ರೆಯಲ್ಲಿದ್ದಾರೆ ಎಂದು ವಿವಿಧ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ನಿಮಯ ಬಾಹಿರ ಒಡೆಯಲಾಗಿದೆ. ಕುಡಲೇ ಹಾಕಲಾಗಿರುವ ಕೇಬಲ್ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

ಕೋರ್ಟ್ ಮೊರೆ ಎಚ್ಚರಿಕೆ:

ಔರಾದ್–ಬೀದರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ದಶಕಗಳ ಕನಸಾಗಿದ್ದು, ಇತ್ತಿಚೇಗಷ್ಟೆ ಕಾಮಗಾರಿ ಪೂರ್ಣಗೊಂಡಿದೆ. ಮಾಜಿ ಸಂಸದ ಭಗವಂತ ಖೂಬಾ ಅವರ ಪ್ರಯತ್ನದಿಂದ ರಸ್ತೆ ನಿರ್ಮಾಣವಾಗಿದೆ. ಆದರೆ ನಿರ್ಮಾಣವಾದ ರಸ್ತೆ ಅಗೆದು ಕೇಬಲ್ ಹಾಕುವದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಕೋರ್ಟ್ ಮೆಟ್ಟಲೇರುವದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ:- ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ