ಪೀಣ್ಯ ಫ್ಲೈಓವರ್ ನಲ್ಲಿ ಮತ್ತೆ ವಾಹನ ಸಂಚಾರಕ್ಕೆ ನಿರ್ಬಂಧ!?: ಫ್ಲೈಓವರ್ ಮಾಡಿದ್ದಾದ್ರೂ ಯಾಕೆ ಅಂತಿದ್ದಾರೆ ಜನ? - Mahanayaka
12:27 PM Wednesday 22 - October 2025

ಪೀಣ್ಯ ಫ್ಲೈಓವರ್ ನಲ್ಲಿ ಮತ್ತೆ ವಾಹನ ಸಂಚಾರಕ್ಕೆ ನಿರ್ಬಂಧ!?: ಫ್ಲೈಓವರ್ ಮಾಡಿದ್ದಾದ್ರೂ ಯಾಕೆ ಅಂತಿದ್ದಾರೆ ಜನ?

peenya flyover
13/01/2023

ಬೆಂಗಳೂರು: ತುಮಕೂರು ರಾಷ್ಟ್ರೀಯ ಹೆದ್ದಾರಿಯ ಪೀಣ್ಯ ಫ್ಲೈಓವರ್ ನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಆರಂಭವಾಗಿದ್ದು, ಮುಂದಿನ  125 ದಿನಗಳ ಕಾಲ ಫ್ಲೈಓವರ್ ಮೇಲೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.

ವರದಿಗಳ ಪ್ರಕಾರ ಫ್ಲೈಓವರ್ ನ ಎಲ್ಲ ಪಿಲ್ಲರ್ ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕದ ಹಿನ್ನೆಲೆಯಲ್ಲಿ  ಮತ್ತೆ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಹೇಳಲಾಗಿದೆ.  ಇದೀಗ ಹೊಸ ಕೇಬಲ್ ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ ಎನ್ನಲಾಗಿದೆ.

ಘನವಾಹನಗಳು ಫ್ಲೈಓವರ್ ನಲ್ಲಿ ಓಡಾಡಿದರೆ ಕೇಬಲ್ ಕಿತ್ತು ಬರುವ ಆತಂಕವಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಫ್ಲೈಓವರ್ ನ ದ್ವಾರದಲ್ಲೇ ಹೆವಿ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ.

ರಾಜ್ಯದಲ್ಲಿ ಎಲ್ಲೆಡೆಗಳಲ್ಲಿ ಸಾಕಷ್ಟು ಫ್ಲೈಓವರ್ ಗಳಿವೆ. ಆದ್ರೆ, ಪೀಣ್ಯ ಪ್ಲೈಓವರ್ ಕಥೆ ಮುಗಿಯದ ಕಥೆಯಾಗಿದೆ. ಪದೇ ಪದೇ ಈ ಫ್ಲೈಓವರ್ ನ್ನು ಬಂದ್ ಮಾಡಿಸುತ್ತಿರುವುದರಿಂದಾಗಿ ವಾಹನ ಸವಾರರು ರೋಸಿ ಹೋಗಿದ್ದಾರೆ. ಕೊನೆಯ ಪಕ್ಷ ಈ ಫ್ಲೈಓವರ್ ನ್ನು ಯಾಕಾದ್ರೂ ನಿರ್ಮಾಣ ಮಾಡಿದ್ರೋ, ಹಿಂದಿನಂತೆ ಇದ್ದಿದ್ದರೂ ಪರವಾಗಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳಪೆ ಕಾಮಗಾರಿಯಿಂದಾಗಿ  ಫ್ಲೈಓವರ್ ನಲ್ಲಿ ಇಷ್ಟೊಂದು ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕು. ಸಾರ್ವಜನಿಕರ ಜೀವನದ ಜೊತೆಗೆ ಆಟವಾಡುವುದು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ