“ಸಡನ್ ಡೆತ್” ಪ್ರಕರಣ ಏರಿಕೆ: ವೈದ್ಯಕೀಯ ಅಧ್ಯಯನದ ಅಗತ್ಯವಿದೆ: ಡಾ.ಪಿ.ವಿ.ಭಂಡಾರಿ
ಉಡುಪಿ: ಕೋವಿಡ್ ನಂತರ “ಸಡನ್ ಡೆತ್ ” ಪ್ರಮಾಣದಲ್ಲಿ ಏರಿಕೆ ಕಂಡಿರುವ ಬಗ್ಗೆ ವೈದ್ಯಕೀಯ ಅಧ್ಯಯನದ ಅಗತ್ಯವಿದೆ. ಉಡುಪಿ ಕರಾವಳಿಯ ಭಾರತೀಯ ವೈದ್ಯಕೀಯ ಸಂಘ ಈ ಕುರಿತು ಸೈಂಟಿಫಿಕ್ ರೀಸರ್ಚ್ ಕೈಗೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದು ,ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ಬೆಗೆ ಉತ್ತರಿಸಿದ ಅವರು ,ಕೊರೋನಾ ಬಳಿಕ ಸಡನ್ ಡೆತ್ (ಹೃದಯಾಘಾತವಾಗಿ ) ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇವೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಘ ಈಗಾಗಲೇ ಸಮಾಲೋಚನೆಗಳನ್ನೂ ನಡೆಸಿದೆ. ಇದಕ್ಕೆ ಕಾರಣಗಳೇನು? ಮುಂದೆ ಈ ರೀತಿ ಆಗದಂತೆ ಅನುಸರಿಸಬೇಕಾದ ಕ್ರಮಗಳೇನು? ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯ ಖಂಡಿತ ಇದೆ. ಜಿಲ್ಲಾ ಸಂಘವು ರಾಜ್ಯ ಮತ್ತು ಕೇಂದ್ರ ಸಂಘದ ಗಮನ ಸೆಳೆಯಲಿದೆ ಎಂದು ಅವರು ಹೇಳಿದರು.
ಇದನ್ನು ವೈದ್ಯಕೀಯ ಲೋಕ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಹಾಗಂತ ಒಂದೆರಡು ಉದಾಹರಣೆ ಇಟ್ಟುಕೊಂಡು ಇಂಥದ್ದೇ ಕಾರಣ ಎಂದೂ ಹೇಳಲಾಗದು. ಒಬ್ಬ ಭಾರತೀಯ ಪ್ರಜೆಯಾಗಿ ಮತ್ತು ವೈದ್ಯನಾಗಿ ಈ ವಿಷಯದ ಬಗ್ಗೆ ಗಮನ ಹರಿಸಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಕಾರಣ ಹುಡುಕುವ ಕೆಲಸವನ್ನು ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























