ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಹೊಸ ಪೋಪ್: ಪೋಪ್ ಲಿಯೋ XIV ಹೆಸರು ಸ್ವೀಕಾರ - Mahanayaka
7:46 PM Wednesday 20 - August 2025

ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಹೊಸ ಪೋಪ್: ಪೋಪ್ ಲಿಯೋ XIV ಹೆಸರು ಸ್ವೀಕಾರ

Pope Leo XIV
09/05/2025


Provided by

ವ್ಯಾಟಿಕನ್ ಸಿಟಿ: ಲ್ಯಾಟಿನ್ ಅಮೆರಿಕಾದಲ್ಲಿ ದೀರ್ಘಕಾಲ ಮಿಷನರಿಯಾಗಿದ್ದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಗುರುವಾರ ಕ್ಯಾಥೋಲಿಕ್ ಚರ್ಚ್ನ ಹೊಸ ಪೋಪ್ ಆಗಿ ಆಯ್ಕೆಯಾಗಿದ್ದಾರೆ.

ಇವರು ಪೋಪ್ 14ನೇಯ ಲಿಯೋ (Pope Leon XIV) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಪೆರು ದೇಶದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು, ಪೆರು ದೇಶದ ಪೌರತ್ವವನ್ನು ಕೂಡ ಪಡೆದಿದ್ದು, ಹೀಗಾಗಿ ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಪೋಪ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

69 ವರ್ಷದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಚಿಕಾಗೋದ ಪ್ರವೋಸ್ಟ್, ಪೆರುವಿನಲ್ಲಿ ಮಿಷನರಿಯಾಗಿ ತಮ್ಮ ವೃತ್ತಿ ಜೀವನವನ್ನು ಬಹುಪಾಲು ಕಳೆದಿದ್ದಾರೆ.
ಹೊಸ ಪೋಪ್ ಆಯ್ಕೆಯ ವೇಳೆ ಹರ್ಷೋದ್ಘಾರ ಮಾಡುತ್ತಿದ್ದ ಗುಂಪನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲರೊಂದಿಗೆ ಶಾಂತಿ ಇರಲಿ, ಎನ್ನುತ್ತಾ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದರು.

ಇನ್ನೂ ಅಮೆರಿಕನ್ ಪೋಪ್ ಆಗಿರುವ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಇದು ನಮ್ಮ ದೇಶಕ್ಕೆ ದೊಡ್ಡ ಗೌರವ ಎಂದಿದ್ದಾರೆ. ನಾನು ಪೋಪ್ ಲಿಯೋ XIV ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ