ರೋಹಿಣಿ ಸಿಂಧೂರಿ  ಹಸುವಿನಂತಿರುವ ವ್ಯಾಘ್ರನ ಮುಖವಾಡ | ಸಾ.ರಾ.ಮಹೇಶ್ - Mahanayaka
6:32 AM Thursday 11 - December 2025

ರೋಹಿಣಿ ಸಿಂಧೂರಿ  ಹಸುವಿನಂತಿರುವ ವ್ಯಾಘ್ರನ ಮುಖವಾಡ | ಸಾ.ರಾ.ಮಹೇಶ್

sa ra mahesh vs rohini sindhuri
08/06/2021

ಮೈಸೂರು: ರೋಹಿಣಿ ಸಿಂಧೂರಿಗೆ ತಾಯಿ ಹೃದಯ ಇಲ್ಲ, ಹಸುವಿನಂತಿರುವ ವ್ಯಾಘ್ರನ ಮುಖವಾಡ ಅವರದ್ದು ಎಂದು  ಸಾ.ರಾ.ಮಹೇಶ್ ತೀವ್ರವಾಗಿ ವೈಯಕ್ತಿಕ ದಾಳಿ ನಡೆಸಿದ್ದಾರೆ.

ಭೂಮಾಫಿಯಾ ನನ್ನ ವರ್ಗಾವಣೆಯ ಹಿಂದಿದೆ ಎಂದು ರೋಹಿಣಿ ಸಿಂಧೂರಿ ಮಾಧ್ಯವೊಂದಕ್ಕೆ ಹೇಳಿಕೆ ನೀಡಿದ್ದರು. ಇದರಿಂದ ಗರಂ ಆಗಿರುವ ಸಾ.ರಾ.ಮಹೇಶ್,  ಹಸುವಿನಂತಿರುವ  ವ್ಯಾಘ್ರನ ಮುಖವಾಡ ಅವರದ್ದು ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

ಭೂಮಾಫಿಯಾ ನಡೆಯುತ್ತಿದೆ ಅಂದ್ರೆ, ಕಳೆದ 8 ತಿಂಗಳಿನಿಂದ ಏನು ಮಾಡ್ತಾ ಇದ್ದೀರಿ? ಒತ್ತುವರಿ ಬಿಡಿಸಬೇಕಿತ್ತು. ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಈಗಲೂ ಗವರ್ನರ್ ಗೆ  ರಿಪೋರ್ಟ್ ಕೊಡಿ ಎಂದು ಅವರು  ಕಿಡಿಕಾರಿದ ಅವರು,  ಇದು ಇಲ್ಲಿಗೆ ನಿಲ್ಲಲ್ಲ, ಈಗ ಶುರುವಾಗಿದೆ ಅಂತ ರೋಹಿಣಿ ಸಿಂಧೂರಿಗೆ ಎಚ್ಚರಿಕೆ ನೀಡಿದರು.

ಇತ್ತೀಚಿನ ಸುದ್ದಿ