ವಿದೇಶಕ್ಕೆ ಅಕ್ರಮವಾಗಿ 5,551 ಕೋಟಿ ರೂ.ಗಳ ಹಣ ವರ್ಗಾವಣೆ: ಶಿಯೋಮಿಯ ಇಬ್ಬರು ಹಿರಿಯ ಅಧಿಕಾರಿಗಳು, 3 ವಿದೇಶಿ ಬ್ಯಾಂಕುಗಳಿಗೆ ಜಾರಿ ನಿರ್ದೇಶನಾಲಯದಿಂದ ಶೋಕಾಸ್ ನೋಟಿಸ್ - Mahanayaka
11:06 PM Tuesday 16 - December 2025

ವಿದೇಶಕ್ಕೆ ಅಕ್ರಮವಾಗಿ 5,551 ಕೋಟಿ ರೂ.ಗಳ ಹಣ ವರ್ಗಾವಣೆ: ಶಿಯೋಮಿಯ ಇಬ್ಬರು ಹಿರಿಯ ಅಧಿಕಾರಿಗಳು, 3 ವಿದೇಶಿ ಬ್ಯಾಂಕುಗಳಿಗೆ ಜಾರಿ ನಿರ್ದೇಶನಾಲಯದಿಂದ ಶೋಕಾಸ್ ನೋಟಿಸ್

10/06/2023

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿ 5,551 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದ ಆರೋಪದಡಿಯಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಸಮೀರ್ ರಾವ್, ಮಾಜಿ ವ್ಯವಸ್ಥಾಪಕ ನಿರ್ದೇಶಕ ಮನು ಜೈನ್ ಮತ್ತು ಮೂರು ಬ್ಯಾಂಕ್‌ಗಳಿಗೆ ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿಯಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನ ಇಬ್ಬರು ಕಾರ್ಯನಿರ್ವಾಹಕರು, ಸಿಟಿ ಬ್ಯಾಂಕ್, ಹೆಚ್​​ಎಸ್​​ಬಿಸಿ ಬ್ಯಾಂಕ್ ಮತ್ತು ಡಾಯ್ಚ ಬ್ಯಾಂಕ್ ಎಜಿಗೆ ಶೋಕಾಸ್ ನೋಟಿಸ್ ನೀಡಿದೆ.

ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರವು ಈ ವಶಪಡಿಸಿಕೊಳ್ಳುವ ಆದೇಶವನ್ನು ದೃಢಪಡಿಸಿದೆ. 5,551.27 ಕೋಟಿ ರೂಪಾಯಿಗೆ ಸಮಾನವಾದ ವಿದೇಶಿ ವಿನಿಮಯವನ್ನು ಶಿಯೋಮಿ ಇಂಡಿಯಾವು ಅನಧಿಕೃತ ರೀತಿಯಲ್ಲಿ ಮಾಡಿದೆ. ಹೀಗಾಗಿ 1999 ರ ಫೆಮಾ ಕಾಯ್ದೆಯ ಸೆಕ್ಷನ್ 4 ಮತ್ತು 37 ಎ ನಿಬಂಧನೆಗಳ ಪ್ರಕಾರ ದಂಡ ವಸೂಲಿ ಮಾಡಬಹುದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ