RSS ಗೀತೆ ವಿಚಾರ: ಕ್ಷಮೆ ಕೇಳ್ತೀನಿ ಎಂದ ಡಿ.ಕೆ.ಶಿವಕುಮಾರ್ - Mahanayaka

RSS ಗೀತೆ ವಿಚಾರ: ಕ್ಷಮೆ ಕೇಳ್ತೀನಿ ಎಂದ ಡಿ.ಕೆ.ಶಿವಕುಮಾರ್

d k shivakumar
26/08/2025


Provided by

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನ ಸಭೆಯಲ್ಲಿ RSS ಗೀತೆ ಹಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದೊಳಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಈ ನಡುವೆ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್ ಈ ವಿಚಾರ ಇಲ್ಲಿಗೆ ಮುಕ್ತಾಯಗೊಳಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

ನನಗೆ  ಯಾರ ಮನಸ್ಸಿಗೂ ನೋಯಿಸಲು ನನಗೆ ಇಷ್ಟವಿಲ್ಲ. ನನ್ನ ಜೀವನ ನಿಮ್ಮ ಜೀವನದ ಮೆಟ್ಟಿಲುಗಳಾಗಬೇಕು ಎಂದುಕೊಂಡವನು ನಾನು. ಯಾರಿಗಾದ್ರೂ ಇದರಿಂದ ನೋವಾಗಿದ್ರು ನಾನು ಕ್ಷಮಾಪಣೆ ಕೇಳಲು ಸಿದ್ದ ಎಂದು ಡಿಕೆಶಿ ಹೇಳಿದರು.

ನನ್ನ ಮಾತಿನ ಬಗ್ಗೆ ಯಾರು ಪ್ರಶ್ನೆ ಮಾಡಿದ್ದಾರೋ ಅವರೆಲ್ಲೂ ಮೂರ್ಖರು. ನಾನು ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತಾಡ್ತಿದ್ದ ಸಂದರ್ಭದಲ್ಲಿ ಆರ್​ ಆರ್ ​ಆರ್ ಗೀತೆ ಹಾಡಿದೆ. ಅವರೆಲ್ಲರೂ ಅವರ ಪಕ್ಷವೇ, ವಿರೋಧ ಪಕ್ಷದ ಅರಿವು ನನಗಿದೆ ಎಂದು ನಾನು ಕಾಲೆಳೆದಿದ್ದೆ. ಇದೇನು ಹೊಸದೇನು ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ವ್ಯವಸ್ಥೆಯಲ್ಲಿ ನನ್ನ ಆಚಾರ ವಿಚಾರ ಮಾತಾಡಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.

1979ರಿಂದ ನಾನು ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡ್ತಾ ಗುರುತಿಸಿಕೊಂಡವನು. ನಾನು ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಇರೋದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ಅವರ ತ್ಯಾಗ್ಯದ ಬಲಿದಾನ, ಆಶೀರ್ವಾದ ಮಾರ್ಗದರ್ಶನ ಪಡೆದು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಶಿವಕುಮಾರ್ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಕಚೇರಿ ನಮಗೆ ದೊಡ್ಡ ದೇವಸ್ಥಾನ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿ ಗಳನ್ನು ಕಟ್ಟಲು ಹೊರಟಿದ್ದೇನೆ‌. ಇದು ನನ್ನ ಕಮಿಟ್ಮೆಂಟ್. ನನ್ನ ಮೇಲೆ ಅನುಮಾನ ಪಡುವವರು ಮೂರ್ಖರು, ಅವರೆಲ್ಲ ನನ್ನ ನನ್ನ ಹತ್ತಿರಕ್ಕೆ ಬರಲು ಅವರು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ