ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಹಿಂದುತ್ವ ಹೋರಾಟಗಾರರಿಗೆ ಮೋಹನ್ ಭಾಗವತ್ ತಿರುಗೇಟು - Mahanayaka

ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಹಿಂದುತ್ವ ಹೋರಾಟಗಾರರಿಗೆ ಮೋಹನ್ ಭಾಗವತ್ ತಿರುಗೇಟು

mohan bhagwat
03/06/2022


Provided by

ನಾಗಪುರ: ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಂದುತ್ವ ಹೋರಾಟಗಾರರಿಗೆ ತಿರುಗೇಟು ನೀಡಿದ್ದಾರೆ.

ಕಾಶಿ ಜ್ಞಾನವಾಪಿ ಸೇರಿದಂತೆ ವಿವಿಧ ಮಸೀದಿಗಳ ಕುರಿತು ಹಿಂದುತ್ವ ಸಂಘಟನೆಗಳು ವಿವಾದ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಆರೆಸ್ಸೆಸ್ ಭಾರತೀಯ ಮೂಲದ್ದಲ್ಲ ಎನ್ನುವ ಚರ್ಚೆಗಳು ಆರಂಭವಾಗಿದ್ದು, ಈ ನಡುವೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮುಸ್ಲಿಮರೇನೂ ಹೊರಗಿನವರಲ್ಲ, ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪೂರ್ವದಲ್ಲಿ ಅವರು ಹಿಂದೂಗಳೇ ಆಗಿದ್ದರು.  ಹಿಂದೂ, ಮುಸ್ಲಿಮರು ಪರಸ್ಪರ ಮಾತುಕತೆಯ ಮೂಲಕ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದಿದ್ದಾರೆ.

ಇನ್ನೂ ಮೋಹನ್ ಭಾಗವತ್ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಎಲ್ಲ ಹೊತ್ತಿ ಉರಿದ ಬಳಿಕ ಬೂದಿಗೆ ನೀರು ಹಾಯಿಸುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿವೆ.

ಅಯೋಧ್ಯೆ ರಾಮ ಮಂದಿರ ಹೋರಾಟದಲ್ಲಿ ಆರೆಸ್ಸೆಸ್ ಪಾಲ್ಗೊಂಡಿತ್ತು ನಿಜ. ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಾವು ಭಾಗಿಯಾಗಿದ್ದು ನಿಜ. ಆದರೆ, ಇನ್ನು ಮುಂದೆ ಅಂತಹ ಹೋರಾಟದಲ್ಲಿ ನಾವು ಭಾಗಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಾತ್ಯಾತೀತಯೇ ನಮ್ಮ ಜೀವವಾಯು, ಜಾತ್ಯತೀತತೆ ಇಲ್ಲವಾದರೆ ಭಾರತವಿಲ್ಲ: ಡಾ.ಕೆ.ಟಿ.ಜಲೀಲ್

ಕಡಬ: ಆರೋಗ್ಯ ತಪಾಸಣೆಗೆ ಬಾರದ ವೈದ್ಯರು | ಕಾದು ಸುಸ್ತಾದ ಕಾರ್ಮಿಕರು

ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ರಕ್ತ ಚಂದನ ಸಾಗಾಟ: ಎಮ್ಮೆಯಿಂದಾಗಿ ಸಿಕ್ಕಿಬಿದ್ದ ಕಳ್ಳರು!

 ಬತ್ತಿದ ನದಿಯಡಿಯಲ್ಲಿ ಪತ್ತೆಯಾಯ್ತು 3,400 ವರ್ಷಗಳಷ್ಟು ಹಳೆಯ ನಗರ!

ಇತ್ತೀಚಿನ ಸುದ್ದಿ