ತನ್ನ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಜಾಹ್ನವಿ ಹೇಗೆ ಕಾಣಿಸಿಕೊಂಡಿದ್ದಾರೆ ಗೊತ್ತಾ? - Mahanayaka
12:12 PM Saturday 18 - October 2025

ತನ್ನ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಜಾಹ್ನವಿ ಹೇಗೆ ಕಾಣಿಸಿಕೊಂಡಿದ್ದಾರೆ ಗೊತ್ತಾ?

26/02/2021

ಜಾಹ್ನವಿ ಕಪೂರ್ ತಮ್ಮ ರೂಹಿ ಚಿತ್ರದ ಪ್ರಚಾರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.  ತಮ್ಮ ತಾಯಿಯ ಪುಣ್ಯ ಸ್ಮರಣೆ ಕಾರ್ಯಕ್ರಮದ ಬಳಿಕ ತಮ್ಮ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡರು.


Provided by

ಹೈದರಾಬಾದ್ ಗೆ ತೆರಳಿ ತಾಯಿಯ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಅವರು ಬಳಿಕ ರೂಹಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದಾರೆ. ಈಗಾಗಲೇ ರೂಹಿ ಚಿತ್ರ ಬಹು ನಿರೀಕ್ಷೆಯನ್ನು ಮೂಡಿಸಿದ್ದು, ಸಿನಿಪ್ರಿಯರ ಮನ ಗೆದ್ದಿದೆ.

ರಾಜ್ ಕುಮಾರ್ ರಾವ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಹಾರರ್ ಕಾಮಿಡಿ ಚಿತ್ರವಾಗಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಸಿನಿಮಾ ಬಿಡುಗಡೆ  ದಿನಾಂಕ ಕೂಡ ಪ್ರಕಟಗೊಂಡಿದೆ.

ಗುಂಜನ್ ಸಕ್ಸೇನ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಜಾಹ್ನವಿ ಕಪೂರ್ ಈಗ ರೂಹಿ ಚಿತ್ರದಲ್ಲಿಕಾಣಿಸಿಕೊಂಡಿದ್ದಾರೆ.  ಈ ಸಿನಿಮಾದ  ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.  ಮಾರ್ಚ್ 11ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ.

ಇತ್ತೀಚಿನ ಸುದ್ದಿ