ರುಕ್ಮಯ್ಯ ಎಂ. ಕಕ್ಯಪದವು ಅವರಿಗೆ ಡಾಕ್ಟರೇಟ್ ಪದವಿ
11/10/2023
ದಕ್ಷಿಣಕನ್ನಡ: ಜಿಲ್ಲೆಯ ಬಂಟ್ವಾಳ ತಾಲೂಕಿನ ರುಕ್ಮಯ್ಯ ಎಂ. ಕಕ್ಯಪದವು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ರಾಜ್ಯಶಾಸ್ತ್ರ ವಿಭಾಗದಲ್ಲಿ ರುಕ್ಮಯ್ಯ ಅವರ “ಕರ್ನಾಟಕದಲ್ಲಿ ಪ್ರಜಾತಾಂತ್ರಿಕ ಪ್ರಯೋಗ, ಕರ್ನಾಟಕ ವಿಧಾನ ಸಭೆಯಲ್ಲಿ ದಲಿತ ಪ್ರಾತಿನಿಧ್ಯದ ಕುರಿತು ಒಂದು ಅಧ್ಯಯನ 1990—2000 ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ರುಕ್ಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಮಾಡೋಡಿ ಮನೆಯ ದಿ.ಎನ್ಕುರ ಮತ್ತು ದಿ.ಬಿರ್ಕುರವರ ಸುಪುತ್ರರಾಗಿದ್ದಾರೆ.




























