ಉಕ್ರೇನ್ ನಲ್ಲಿ ಅನ್ನ ನೀರಿಗಾಗಿ ಪರದಾಡುತ್ತಿರುವ ಭಾರತೀಯರು! - Mahanayaka
3:07 PM Thursday 16 - October 2025

ಉಕ್ರೇನ್ ನಲ್ಲಿ ಅನ್ನ ನೀರಿಗಾಗಿ ಪರದಾಡುತ್ತಿರುವ ಭಾರತೀಯರು!

russia ukraine crisis
26/02/2022

ಬೆಂಗಳೂರು:  ಉಕ್ರೇನ್ ರಷ್ಯಾ ನಡುವಿನ ಯುದ್ಧ ರೋಮಾಂಚಕಕಾರಿ  ಅಲ್ಲ.  ಮಾಧ್ಯಮಗಳಲ್ಲಿ ಯುದ್ಧವನ್ನು ರೋಮಾಂಚನಕಾರಿಯಾಗಿ ವಿವರಿಸುವಂತೆ ಉಕ್ರೇನ್ ನ ಪರಿಸ್ಥಿತಿಗಳಿಲ್ಲ.  ಕೇವಲ ಉಕ್ರೇನ್ ಮಾತ್ರವಲ್ಲದೇ ಉಕ್ರೇನ್ ನಲ್ಲಿ ಸಿಲುಕಿರುವ ಭಾರತದ ಜನರ ಸ್ಥಿತಿ ಅಕ್ಷರಶಃ ನರಕ ಸಾದೃಶವಾಗಿದೆ.


Provided by

ರಷ್ಯಾ ಸೇನೆಯ ಕ್ರೌರ್ಯ ವಿಜೃಂಬಿಸುತ್ತಲೇ ಇದೆ. ಸದ್ಯ ಭಾರತದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಹೇಳುತ್ತಿರುವಂತೆ ಕಿಲೋ ಮೀಟರ್ ಗೆ ಒಂದರಂತೆ ಬಾಂಬ್ ದಾಳಿ ನಡೆಸುತ್ತಿರುವ ರಷ್ಯಾ, ಕರುಣೆಯೇ ಇಲ್ಲದೇ ಮುನ್ನುಗ್ಗುತ್ತಿದೆ.

ಉಕ್ರೇನ್ ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳು ಸದ್ಯ ಊಟ ನೀರಿಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿ ತಲೆದೋರಿದೆ.  ಎಲ್ಲರೂ ಪೋಲೇಂಡ್ ಗೆ ನೀವು ತೆರಳಿ ಎಂದು ಹೇಳುತ್ತಿದ್ದಾರೆ. ಆದರೆ, ಅಲ್ಲಿಗೆ ಪ್ರಯಾಣ ಮಾಡುವುದು ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.

ಕೆಲವೇ ಕೆಲವು ದಿನಗಳಿಗೆ ಸಾಕಾಗುವಷ್ಟು ಆಹಾರ ಪದಾರ್ಥಗಳಿದ್ದು, ಕುಡಿಯುವ ನೀರು ಕೂಡ ಕಡಿಮೆ ಪ್ರಮಾಣದಲ್ಲಿದೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ  ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಭಾರತದಲ್ಲಿರುವ ಪೋಷಕರು ತಮ್ಮ ಮಕ್ಕಳ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಈ ಯುದ್ಧ ಒಂದು ಬಾರಿ ನಿಂತು ಹೋದರೆ ಸಾಕು ಎಂದು ತಾವು ನಂಬುವ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ಮಕ್ಕಳ ಅಳು ಕೇಳುವವರಿಲ್ಲ, ಪ್ರಾಣ ಹಾನಿಯನ್ನು ವಿವರಿಸಲು ಪದಗಳಿಲ್ಲ. ಯಾವಾಗ ನಮ್ಮ ಮೇಲೆ ಬಾಂಬ್ ಗಳು ಬೀಳುತ್ತವೋ, ನಾವು ಛಿದ್ರವಾಗಿ ಹೋಗುತ್ತೇವೆಯೋ ಎನ್ನುವ ಆತಂಕದಲ್ಲಿ ಜನರು ಬದುಕುವಂತಾಗಿದೆ. ಸದ್ಯ ಇಲ್ಲಿನ ವಿದ್ಯಾರ್ಥಿಗಳು ಹೇಳುತ್ತಿರುವಂತೆ ಸುಮಾರು 50 ಸಾವಿರ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನನಗೆ ಮದ್ದುಗುಂಡು ನೀಡಿ, ಪ್ರಯಾಣ ವ್ಯವಸ್ಥೆ ಬೇಡ | ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ತಿರುಗೇಟು

ಮಚ್ಚಿನಿಂದ ಹೊಡೆದು ಪತಿಯಿಂದ ಪತ್ನಿಯ ಕೊಲೆ

ದಲಿತ ಯುವಕನ ಕೊಲೆ ಪ್ರಕರಣ: ಆರೋಪಿ ಪೊಲೀಸ್‌ ವಶಕ್ಕೆ

ರಷ್ಯಾದ ಸಾರಿಗೆ ವಿಮಾನ ಹೊಡೆದುರುಳಿಸಿದ ಉಕ್ರೇನ್ : ಅಧಿಕಾರಿಗಳ ಮಾಹಿತಿ

ಫ್ಲೆಕ್ಸ್‌ ಅಳವಡಿಸುತ್ತಿದ್ದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಯುವಕ ಸಾವು

 

ಇತ್ತೀಚಿನ ಸುದ್ದಿ