ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಘೋಷಣೆ - Mahanayaka
11:34 AM Wednesday 20 - August 2025

ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಘೋಷಣೆ

russia ukraine crisis
24/02/2022


Provided by

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್‌ ನಡುವಿನ ಬಿಕ್ಕಟ್ಟು ಮತ್ತಷ್ಟು ಜಟಿಲಗೊಂಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿಲ್‌, ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದ್ದಾರೆ.

ಗುರುವಾರ ಉಕ್ರೇನ್‌ ಮೇಲೆ ಮಿಲಿಟರಿ ದಾಳಿ ನಡೆಸುವಂತೆ ತನ್ನ ಪುಟಿನ್‌ ಅವರು ಸೇನೆಗೆ ಸೂಚನೆ ನೀಡಿದ್ದಾರೆ. ಸೂಚನೆ ಬೆನ್ನಲ್ಲೇ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದೆ.
ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ ಎಂದು ಹೇಳಿರುವ ಅವರು, ಈ ವಿಚಾರವಾಗಿ ಯಾರಾದರೂ ಮಧ್ಯಪ್ರವೇಶಿಸಿದರೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್‌ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ್ದಾರೆ.

ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪುಟಿನ್ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ ʻಯಾವುದೇ ಉತ್ತರವಿಲ್ಲ, ಕೇವಲ ಮೌನʼ ಎಂದು ತಿಳಿಸಿದ್ದಾರೆ. ಮಾಸ್ಕೋ ಈಗ ಉಕ್ರೇನ್‌ನ ಗಡಿಯ ಬಳಿ ಸುಮಾರು 2,00,000 ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾಲಬಾಧೆ: ಮಗಳನ್ನು ಕೊಂದು ತಂದೆ ಆತ್ಮಹತ್ಯೆ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ, ಎನ್ ಸಿಪಿ ನಾಯಕ ನವಾಬ್ ಮಲಿಕ್ ಬಂಧನ

ಚಿನ್ನದಂಗಡಿಯ ಗೋಡೆ ಕೊರೆದು 2 ಕೆ.ಜಿ. ಚಿನ್ನ ಕಳವು ಮಾಡಿದ ಕಳ್ಳರು!

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿದ್ದ ಹೆಲಿಕಾಪ್ಟರ್​ ಲ್ಯಾಂಡಿಂಗ್​ ವೇಳೆ ಕಾಲೇಜು ಕಾಂಪೌಂಡ್ ಗೋಡೆ ಕುಸಿತ

ಮಂತ್ರಾಲಯಕ್ಕೆ ಹೊರಟಿದ್ದ ಕೆ ಎಸ್‌ ಆರ್‌ ಟಿಸಿ ಬಸ್​ ನಲ್ಲಿ​ ಕುಸಿದುಬಿದ್ದು ಕಂಡಕ್ಟರ್​ ಸಾವು

ಇತ್ತೀಚಿನ ಸುದ್ದಿ