ರಷ್ಯಾದಲ್ಲಿ ಲಿಂಗಪರಿವರ್ತನೆಗೆ ಇನ್ನಿಲ್ಲ ಅವಕಾಶ: ಹೊಸ ಕಾನೂನು ಜಾರಿ ಮಾಡಿದ ಪುಟಿ‌ನ್ - Mahanayaka
11:47 PM Tuesday 21 - October 2025

ರಷ್ಯಾದಲ್ಲಿ ಲಿಂಗಪರಿವರ್ತನೆಗೆ ಇನ್ನಿಲ್ಲ ಅವಕಾಶ: ಹೊಸ ಕಾನೂನು ಜಾರಿ ಮಾಡಿದ ಪುಟಿ‌ನ್

25/07/2023

ಲಿಂಗಪರಿವರ್ತನೆ ಮಾಡುವ ಯಾವುದೇ ವೈದ್ಯಕೀಯ ಚಟುವಟಿಕೆಗಳಿಗೆ ನಿಷೇಧ ಹೇರುವ ಹೊಸ ಕಾನೂನಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಹಿ ಹಾಕಿದ್ದಾರೆ.
ಹೀಗಾಗಿ LGBTQ ಸಮುದಾಯಕ್ಕೆ ರಷ್ಯಾದಲ್ಲಿ ಮತ್ತೊಂದು ಹಿನ್ನಡೆ ಉಂಟಾಗಿದೆ.
ಸಾಂಪ್ರದಾಯಿಕ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಲೇ ಬಂದಿರುವ ವ್ಲಾಡಿಮಿರ್ ಪುಟಿನ್ ಸಲಿಂಗಿಗಳಿಗೆ ಹಾಗೂ ಟ್ರಾನ್ಸ್‌ಜೆಂಡರ್‌ ಸಮೂಹಗಳಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ.

ಲಿಂಗ ಪರಿವರ್ತನೆ ವಿರುದ್ಧ ಮಸೂದೆಗೆ ಸಂಸತ್ತಿನ ಎರಡೂ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದ್ದು, ಮಸೂದೆಯು ಯಾವುದೇ ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವೈದ್ಯಕೀಯ ಚಟುವಟಿಕೆಯನ್ನು ನಿಷೇಧಿಸುತ್ತದೆ. ಆದರೆ, ಜನ್ಮಜಾತ ವೈಪರೀತ್ಯಗಳಿಗೆ ಚಿಕಿತ್ಸೆ ನೀಡಲು ಮಾತ್ರ ವಿನಾಯಿತಿ ನೀಡಲಾಗಿದೆ.

ಲಿಂಗವನ್ನು ಬದಲಾಯಿಸಿದವರ ನಡುವಿನ ವಿವಾಹಗಳನ್ನು ಸಹ ಇದು ರದ್ದುಗೊಳಿಸುತ್ತದೆ, ಅಲ್ಲದೇ ಲಿಂಗಪರಿವರ್ತಿತ ವ್ಯಕ್ತಿಗಳಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಾಗೂ ಪೋಷಕರಾಗುವುದನ್ನೂ ಈ ಕಾಯ್ದೆ ತಡೆಯುತ್ತದೆ.
ಈ ಕಾನೂಸು ದೇಶದ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಹಾಗೂ ಪಾಶ್ಚಿಮಾತ್ಯ ಕುಟುಂಬ ವಿರೋಧಿ ಸಿದ್ಧಾಂತದ ವಿರುದ್ಧ ರಷ್ಯಾವನ್ನು ರಕ್ಷಿಸಲಿದೆ ಎಂದು ಸರ್ಕಾರಿ ಮೂಲಗಳು ಸಮರ್ಥಿಸಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ