ಕನ್ನಡವೇ ‘ಸಚ್ಚ’, ಕನ್ನಡವೇ ‘ನಿಚ್ಚ’ ಎಂದು ಡೈಲಾಗ್ ಹೊಡೆದು ಟ್ರೋಲ್ ಆದ ‘ಅಖಂಡ’ ಬಾಲಯ್ಯ! - Mahanayaka
4:59 PM Saturday 13 - December 2025

ಕನ್ನಡವೇ ‘ಸಚ್ಚ’, ಕನ್ನಡವೇ ‘ನಿಚ್ಚ’ ಎಂದು ಡೈಲಾಗ್ ಹೊಡೆದು ಟ್ರೋಲ್ ಆದ ‘ಅಖಂಡ’ ಬಾಲಯ್ಯ!

balayya kannada dialogue
13/12/2025

ತೆಲುಗಿನ ‘ಅಖಂಡ 2’ ಚಿತ್ರ  ಡಿಸೆಂಬರ್ 12 ರಂದು ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೊಂಡ ಬೆನ್ನಲ್ಲೇ ಚಿತ್ರದ ಒಂದು ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.  ಹಿರಿಯ ನಟ ಬಾಲಯ್ಯ(Nandamuri Balakrishna) ಕನ್ನಡಿಗರ ಮೇಲಿನ ಪ್ರೀತಿಯನ್ನು ಡೈಲಾಗ್ ಮೂಲಕ ಹೇಳಿದ್ದಾರೆ.  ಆದ್ರೆ, ಈ ಡೈಲಾಗ್ ಈಗ ನೆಗೆಟಿವ್ ಆಗಿ ವೈರಲ್ ಆಗುತ್ತಿದೆ.

ಡೈಲಾಗ್ ನಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದನ್ನು ಬಾಲಯ್ಯ ತಪ್ಪು ತಪ್ಪಾಗಿ ಉಚ್ಛರಿಸಿದ್ದಾರೆ. ಹೀಗಾಗಿ ಈ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಲನ್ ಒಬ್ಬ ನಾನು ಕನ್ನಡದವನು ಅಂತಾನೆ ಈ ವೇಳೆ ಬಾಲಯ್ಯ, ಕನ್ನಡ ನನಗೂ ಗೊತ್ತಿದೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀನು ಕನ್ನಡವಾಗಿರು ಎಂದರಲ್ಲದೇ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ಬದಲು ಕನ್ನಡವೇ ಸಚ್ಚ, ಕನ್ನಡವೇ ನಿಚ್ಚ ಎಂದು ಉಚ್ಛರಿಸಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಸಿನಿಮಾದಲ್ಲಿ ಕನ್ನಡ ಬಳಕೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಕನ್ನಡ ಬಳಕೆಯನ್ನು ತಪ್ಪಾಗಿ ಮಾಡಬಾರದಿತ್ತು. ಡಬ್ಬಿಂಗ್ ನಲ್ಲಿ ಅದನ್ನು ಸರಿಪಡಿಸಬಹುದಿತ್ತು, ಚಿತ್ರ ತಂಡ ಯಾಕೆ ಅದನ್ನು ಗಮನಿಸಲಿಲ್ಲ ಎನ್ನುವ ಪ್ರಶ್ನೆಗಳನ್ನು ಸಾಕಷ್ಟು ಜನರು ಮುಂದಿಟ್ಟಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ