ಸದನದಲ್ಲಿಯೇ ಶರ್ಟ್ ಬಿಚ್ಚಿದ ಶಾಸಕ | ಕಾರಣ ಏನು ಗೊತ್ತಾ? - Mahanayaka
6:27 AM Wednesday 20 - August 2025

ಸದನದಲ್ಲಿಯೇ ಶರ್ಟ್ ಬಿಚ್ಚಿದ ಶಾಸಕ | ಕಾರಣ ಏನು ಗೊತ್ತಾ?

04/03/2021


Provided by

ಬೆಂಗಳೂರು: ಒಂದು ದೇಶ ಒಂದೇ ಚುನಾವಣೆ ಎಂಬ ವಿಚಾರದಲ್ಲಿ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕರೋರ್ವರು ವಿಧಾನಸಭೆ ಅಧಿಕವೇಶನದಲ್ಲಿ ಶರ್ಟ್ ಬಿಚ್ಚಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟನೆ ಮಾಡಿದರು. ಈ ವೇಳೆ ಗರಂ ಆದ ಸ್ಪೀಕರ್ ಸದನ ಅಂದ್ರೆ ಏನು ಅಂತ ಅಂದುಕೊಂಡಿದ್ದೀರಿ? ಈ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ ಎಂದು ಪ್ರತಿಭಟನೆಯನ್ನು ವಿರೋಧಿಸಿದರು.

ಸ್ಪೀಕರ್ ಅವರ ಎಚ್ಚರಿಕೆಯನ್ನು ಲೆಕ್ಕಿಸದ ಸಂಗಮೇಶ್ ತಮ್ಮ ಪಟ್ಟು ಸಡಿಲಿಸಲಿಲ್ಲ. ಸ್ವತಃ ಸಿದ್ದರಾಮಯ್ಯನವರು ಕರೆದರೂ ಸಂಗಮೇಶ್ ಎದ್ದು ಬರಲೇ ಇಲ್ಲ. ಕೊನೆಗೆ ಡಿ.ಕೆ. ಶಿವಕುಮಾರ್ ಸಂಗಮೇಶ್ ಅವರನ್ನು ಮನವೊಲಿಸಿ ಷರ್ಟ್ ಹಾಕಿಸಿದ್ದಾರೆ.

ಇನ್ನೂ ಷರ್ಟ್ ಬಿಚ್ಚಿ ಸದನದಲ್ಲಿ ಅಶಿಸ್ತು ತೋರಿದ್ದಾರೆ ಎಂದು ಆರೋಪಿಸಿ ಸಂಗಮೇಶ್ ಅವರನ್ನು ಒಂದು ವಾರ ಸದನದಿಂದ ಸ್ಪೀಕರ್ ಕಾಗೇರಿ ಆದೇಶ ನೀಡಿದ್ದಾರೆ.

whatsapp

ಇತ್ತೀಚಿನ ಸುದ್ದಿ