ಬಾಲಕಿಯ ಹತ್ಯೆಯ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲ ಎಂದ ಸಾಹಿಲ್: 25 ಬಾರಿ ಇರಿದು ಹತ್ಯೆ
ನವದೆಹಲಿ: ದೆಹಲಿಯಲ್ಲಿ 16 ವರ್ಷದ ಬಾಲಕಿಯನ್ನು ಸಾರ್ವಜನಿಕ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ ಉತ್ತರ ಪ್ರದೇಶದ ಬುಲಂದರ್ ಶಹರ್ ನಲ್ಲಿ ಎಸಿ ರಿಪೇರಿ ಮಾಡುವ ಸಾಹಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಗೆ ಸಾಹಿಲ್ ಸುಮಾರು 22 ಬಾರಿ ಇರಿದಿದ್ದು, ಬಳಿಕ ಚಪ್ಪಡಿ ಕಲ್ಲಿನಿಂದ ತಲೆಗೆ ಭೀಕರ ದಾಳಿ ನಡೆಸಿದ್ದ. ಬಾಲಕಿ ಸಾವನ್ನಪ್ಪಿದರೂ ಕೂಡ ಆತ ಮತ್ತೆ ಮತ್ತೆ ಹಲ್ಲೆ ನಡೆಸುತ್ತಲೇ ಇದ್ದ. ನಿನ್ನೆ ಪೊಲೀಸರು ಆತನನ್ನು ಬಂಧಿಸಿದ ಬಳಿಕ, ಆತ ಬಾಲಕಿಯನ್ನು ಹತ್ಯೆ ಮಾಡಿದ್ದಕ್ಕೆ ತನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾನೆ.
ಆಕೆ ತನ್ನೊಂದಿಗೆ ಬ್ರೇಕಪ್ ಮಾಡಲು ಬಯಸಿದ್ದಳು. ಹಾಗೂ ಮಾಜಿ ಬಾಯ್ ಫ್ರೆಂಡ್ ಜೊತೆಗೆ ಶಾಮೀಲಾಗಿದ್ದಳು ಎಂದು ಸಾಹಿಲ್ ಹೇಳಿದ್ದಾನೆ. ಮೂರು ವರ್ಷಗಳ ಕಾಲ ಬಾಲಕಿ ಜೊತೆಗೆ ಡೇಟಿಂಗ್ ನಲ್ಲಿದ್ದು ಇತ್ತೀಚೆಗೆ ಅವಳು ಬ್ರೇಕಪ್ ಮಾಡಲು ಮುಂದಾಗಿದ್ದಳು. ಕೆಲ ಕಾಲದಿಂದ ತನ್ನನ್ನು ಆಕೆ ನಿರ್ಲಕ್ಷಿಸುತ್ತಿದ್ದಳು. ಜೊತೆಗೆ ತನ್ನಿಂದ ದೂರವಾಗದೇ ಇದ್ದರೆ, ಪೊಲೀಸರಿಗೆ ದೂರು ನೀಡುವುದಾಗಿ ಬಾಲಕಿ ಬೆದರಿಸಿದ್ದಳು.
ಜೊತೆಗೆ ಆಟಿಕೆ ಪಿಸ್ತೂಲ್ ತೋರಿಸಿ ಸಾಹಿಲ್ ನನ್ನು ಬೆದರಿಸಿದ್ದಳು, ಇದರಿಂದ ಆಕ್ರೋಶಗೊಂಡು ಹತ್ಯೆ ಮಾಡಿರುವುದಾಗಿ ಸಾಹಿಲ್ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಸಾಹಿಲ್ ಚಾಕು ಮತ್ತು ಫೋನ್ ಎಸೆದು ಬುಲಂದರ್ ಶಹರ್ ಗೆ ತೆರಳಿ ತನ್ನ ಚಿಕ್ಕಮ್ಮನ ಮನೆಯಲ್ಲಿ ಅಡಗಿಕೊಂಡಿದ್ದ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























