ರಘು ಸಕಲೇಶಪುರ ಎಲ್ಲಿ? ಎಂದು ಪ್ರಶ್ನಿಸಿ ಬಿಜೆಪಿ ಯುವ ಮುಖಂಡನಿಗೆ ಪೊಲೀಸರಿಂದ ಹಲ್ಲೆ: ಪ್ರತಿಭಟನೆಗೆ ಮುಂದಾದ ಬಿಜೆಪಿ - Mahanayaka

ರಘು ಸಕಲೇಶಪುರ ಎಲ್ಲಿ? ಎಂದು ಪ್ರಶ್ನಿಸಿ ಬಿಜೆಪಿ ಯುವ ಮುಖಂಡನಿಗೆ ಪೊಲೀಸರಿಂದ ಹಲ್ಲೆ: ಪ್ರತಿಭಟನೆಗೆ ಮುಂದಾದ ಬಿಜೆಪಿ

chikkamagaluru
03/07/2023


Provided by

ಚಿಕ್ಕಮಗಳೂರು: ಬಜರಂಗದಳ ಮುಖಂಡ, ರೌಡಿಶೀಟರ್ ರಘು ಸಕಲೇಶಪುರ ಪ್ರಚೋದನಾಕಾರಿ ಹೇಳಿಕೆ ನೀಡಿ ಇದೀಗ ಪರಾರಿಯಾಗಿದ್ದು, ಆತನ ಸಹಚಾರರಿಗೆ ಸಂಕಷ್ಟ ಎದುರಾಗಿದೆ.

ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆ ರಘು ಸಕಲೇಶಪುರ ನಾಪತ್ತೆಯಾಗಿದ್ದ ಇದೀಗ ಈತನ ಪತ್ತೆಗಾಗಿ  ಸಖಲೇಶಪುರ ಪೊಲೀಸರು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಎಂಬ ಯುವಕನನ್ನು ವಶಕ್ಕೆ ಪಡೆದು  ರಘು ಸಕಲೇಶಪುರ, ಎಲ್ಲಿದ್ದಾನೆ ಹೇಳು ಎಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೂಡಿಗೆರೆ–ಸಕಲೇಶಪುರ ಒಂದಕ್ಕೊಂದು ಅಂಟಿಕೊಂಡಿರುವ ಅಕ್ಕಪಕ್ಕದ ತಾಲೂಕುಗಳಾಗಿವೆ, ರಘುನನ್ನು ಪತ್ತೆ ಹಚ್ಚಲು ಪೊಲೀಸರು ಅವಿನಾಶ್ ಗೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಸಕಲೇಶಪುರ ಠಾಣೆಗೆ ಕರೆದೊಯ್ದು ಅವಿನಾಶ್ ಮೇಲೆ ತೀವ್ರ ಹಲ್ಲೆ ನಡೆಸಲಾಗಿದ್ದು, ಇದರಿಂದಾಗಿ  ಅವಿನಾಶ್, ತಲೆ, ಕಿವಿ, ಕೈಗೆ ತೀವ್ರ ಗಾಯಗಳಾಗಿವೆ. ಸದ್ಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಅವಿನಾಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ  ಅವಿನಾಶ್ ಮೇಲಿನ ಹಲ್ಲೆ ಖಂಡಿಸಿ, ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸಕಲೇಶಪುರ ಡಿ.ವೈ.ಎಸ್.ಪಿ. ಮಿಥುನ್ ಅಮಾನತ್ತಿಗೆ‌ ಆಗ್ರಹಿಸಿದ್ದಾರೆ. 1000ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸೇರಿ ಮೂಡಿಗೆರೆಯಲ್ಲಿ ಮಧ್ಯಾಹ್ನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ವಿಡಿಯೋ ನೋಡಿ:

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ