ಸಾಲಗಾರರ ಹೆಸರು ವಾಟ್ಸಾಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ - Mahanayaka

ಸಾಲಗಾರರ ಹೆಸರು ವಾಟ್ಸಾಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ

vijay
25/04/2022

ಗುಂಡ್ಲುಪೇಟೆ: ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಸೋಮವಾರ ನಡೆದಿದೆ.


Provided by

ಇಲ್ಲಿನ  ಬೆಟ್ಟಹಳ್ಳಿ ಗ್ರಾಮದ 27 ವರ್ಷ ವಯಸ್ಸಿನ ವಿಜಯ್, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.  ಆತ್ಮಹತ್ಯೆ ಮಾಡುವುದಕ್ಕೂ ಮೊದಲು ತಾನು ಸಾಲ ಮಾಡಿರುವವರ ಹೆಸರನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾನೆ.

ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದೇ ಅಲ್ಲದೇ  ತಾನು ಕೊಡಬೇಕಿರುವ ಸಾಲದ ಮಾಹಿತಿ ಬರೆದಿದ್ದು, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಮೃತದೇಹ ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ  ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹುಟ್ಟುಹಬ್ಬಕ್ಕೆ ಪ್ರೇಯಸಿಯನ್ನು ಕರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯಕರ

ಬುಲ್ಡೋಜರ್ ನಿಂದ ಎಟಿಎಂ ಧ್ವಂಸಗೊಳಿಸಿ ಹಣದೋಚಿದ ಕಳ್ಳರು:  ಕಳ್ಳರಿಗೆ ಮಾದರಿಯಾಯ್ತೆ ಬುಲ್ಡೋಜರ್ ಕಾರ್ಯಾಚರಣೆ!

ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ಇಬ್ಬರು ದುರ್ಮರಣ

ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಅಮೆರಿಕ, ತುರ್ತುಪರಿಸ್ಥಿತಿ ಘೋಷಣೆ !

ಪ್ರೆಶರ್ ಕುಕ್ಕರ್ ಸ್ಫೋಟ: ಯುವಕ ದಾರುಣ ಸಾವು

ಇತ್ತೀಚಿನ ಸುದ್ದಿ