ಯುಪಿಯಲ್ಲಿ ಸಮಾಜವಾದಿ ಪಕ್ಷದ ನಾಯಕನ ಹತ್ಯೆ: ಬಿಜೆಪಿ ಕೌನ್ಸಿಲರ್ ಮತ್ತು ಪುತ್ರನ ವಿರುದ್ಧ ಕೇಸ್ - Mahanayaka

ಯುಪಿಯಲ್ಲಿ ಸಮಾಜವಾದಿ ಪಕ್ಷದ ನಾಯಕನ ಹತ್ಯೆ: ಬಿಜೆಪಿ ಕೌನ್ಸಿಲರ್ ಮತ್ತು ಪುತ್ರನ ವಿರುದ್ಧ ಕೇಸ್

21/07/2024


Provided by

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸ್ಥಳೀಯ ಸಮಾಜವಾದಿ ಪಕ್ಷದ ನಾಯಕನನ್ನು ಹತ್ಯೆ ಮಾಡಲಾಗಿದೆ. ಬಿಜೆಪಿ ಕೌನ್ಸಿಲರ್ ಮತ್ತು ಅವರ ಮೂವರು ಪುತ್ರರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓಂ ಪ್ರಕಾಶ್ ಸಿಂಗ್ ಅವರ ಮೇಲೆ ರಾತ್ರಿ ಅವರ ಮನೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಿ ಸಿಂಗ್ ಅವರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆದರೆ ಕುಟುಂಬಸ್ಥರು ಘಟನೆಯನ್ನು ಖಂಡಿಸಿ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದರು. ಅವರು ಸಿಂಗ್ ಅವರ ಶವವನ್ನು ರಸ್ತೆಯ ಮೇಲೆ ಇರಿಸಿದರು ಮತ್ತು ಆರೋಪಿಗಳನ್ನು ಬಂಧಿಸಿದ ನಂತರವೇ ಅಂತಿಮ ವಿಧಿಗಳನ್ನು ನಡೆಸಲಾಗುವುದು ಎಂದು ಪಟ್ಟು ಹಿಡಿದರು.

ಪಾರ್ಸಾಪುರ ಪಟ್ಟಣದ ರಾಜಾ ತೋಲಾದಲ್ಲಿರುವ ಅವರ ಮನೆಗೆ ನುಗ್ಗಿದ ಕೆಲವರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ನಂತರ ಸಿಂಗ್ (45) ಅವರನ್ನು ಹತ್ಯೆ ಮಾಡಲಾಗಿತ್ತು.

ಪ್ರತಿಭಟನೆಯ ನಂತರ, ಹಿರಿಯ ಎಸ್ಪಿ ನಾಯಕ ಯೋಗೇಶ್ ಪ್ರತಾಪ್ ಸಿಂಗ್, ಮಾಜಿ ಶಾಸಕ ಬೈಜನಾಥ್ ದುಬೆ ಮತ್ತು ಇತರ ಪಕ್ಷದ ಮುಖಂಡರು ಅವರ ಮನೆಗೆ ತಲುಪಿ ನ್ಯಾಯಯುತ ಮತ್ತು ತಕ್ಷಣದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ