ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಗದರಿದ ಮಾಜಿ ಸಿಎಂ ಸಿದ್ದರಾಮಯ್ಯ!| ಕಾರಣ ಏನು ಗೊತ್ತಾ? - Mahanayaka
10:22 AM Tuesday 14 - October 2025

ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಗದರಿದ ಮಾಜಿ ಸಿಎಂ ಸಿದ್ದರಾಮಯ್ಯ!| ಕಾರಣ ಏನು ಗೊತ್ತಾ?

siddaramaiha
12/12/2021

ಬೆಂಗಳೂರು: ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದವರ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ರೇಗಾಡಿದ ಘಟನೆ ನಡೆದಿದ್ದು, ಸಿದ್ದರಾಮಯ್ಯನವರು ಕಾರಿನಲ್ಲಿ ಪ್ರಯಾಣಿಸಲು ಸಿದ್ದರಾಗುತ್ತಿದ್ದಂತೆಯೇ ಅವರನ್ನು ಭೇಟಿಯಾಗಲು ಬಂದವರ ಮೇಲೆ ಸಿದ್ದರಾಮಯ್ಯ ಗರಂ ಆದರು.


Provided by

ಸಿದ್ದರಾಮಯ್ಯನವರ ಬಳಿಯಲ್ಲಿ ತಮ್ಮ ಸಮಸ್ಯೆಗಳನ್ನು ಇಬ್ಬರು ವ್ಯಕ್ತಿಗಳು ಹೇಳಿಕೊಳ್ಳಲು ಮುಂದಾಗಿದ್ದು, ಈ ವೇಳೆ ಸಿದ್ದರಾಮಯ್ಯನವರು ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಇದಲ್ಲದೇ, ಏನೇನು ದಾಖಲೆ ತಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದವರ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಅವರ ಪೈಕಿ ಒಬ್ಬರ ಕೈಯಲ್ಲಿ ಒಂದು ಪತ್ರವಿದ್ದು, ಈ ಪತ್ರವನ್ನು ತೆಗೆದುಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸಿದಾಗ ಆ ವ್ಯಕ್ತಿ ಪತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಿದ್ದರಾಮಯ್ಯನವರಿಗೆ ನೀಡಲಿಲ್ಲ. ಇದರಿಂದ ಸಿದ್ದರಾಮಯ್ಯ ಗರಂ ಆದರು.

“ಏಯ್… ಏನ್ರಿ ನೀವು? ಅದನ್ನು ಕೊಡೋದು ಇಲ್ಲ ನೀವು… ಸುಮ್ನೆ” ಎಂದು ಗದರಿದರು. “ಏನೂ ತಂದಿಲ್ಲ ನೀವು, ಆಮೇಲೆ ಕೊಡಿ, ಸಾಯಂಕಾಲ” ಎಂದು ಹೇಳಿ ಅವರು ಸ್ಥಳದಿಂದ ಕಾರಿನಲ್ಲಿ ತೆರಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಠದ ಜಮೀನಿನಲ್ಲಿ ಕಳೆ ಕೀಳುತ್ತಿದ್ದ ವೇಳೆ ಹಾವು ಕಡಿದು ಸ್ವಾಮೀಜಿ ಸಾವು!

“ಮಠಕ್ಕೆ ಬಂದು ತತ್ತಿ ತಂತೀವಿ” | ಮೊಟ್ಟೆ ವಿರೋಧಿ ಮಠಾಧೀಶರ ಬೆಂಡೆತ್ತಿದ ಮಕ್ಕಳು

ಬಿಟ್ ಕಾಯಿನ್ ಹಗರಣದ ಸೂತ್ರಧಾರ ‘ಶ್ರೀಕೃಷ್ಣ’ ಕರ್ನಾಟಕದಿಂದ ಪರಾರಿ?

ನಾಡೋಜ ಕವಿ ದಿ.ಸಿದ್ಧಲಿಂಗಯ್ಯ ಅವರ ಸಹಧರ್ಮಿಣಿ ರಮಾದೇವಿಯವರು ಇಂದು ಕಾಸರಗೋಡಿಗೆ

ಮಕ್ಕಳು ಅಪೌಷ್ಠಿಕತೆಯಿಂದ ತುಂಬಾ ಒದ್ದಾಡುತ್ತಿದ್ದಾರೆ | ಮೊಟ್ಟೆ ವಿರೋಧಕ್ಕೆ ಶಿಕ್ಷಣ ಸಚಿವರು ಹೇಳಿದ್ದೇನು?

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಮತಾಂತರಕ್ಕೆ ಯತ್ನಿಸಿರುವುದು ಪತ್ತೆ

ಬುಡಕಟ್ಟು ಮಹಿಳೆಯರ ಜೊತೆ ಪ್ರಿಯಾಂಕಾ ಗಾಂಧಿ ನೃತ್ಯ: ನಾಚಿಕೆಯಾಗುವುದಿಲ್ಲವೇ? ಎಂದು ಕೇಳಿದ ಬಿಜೆಪಿ!

ಇತ್ತೀಚಿನ ಸುದ್ದಿ