ಸಂಭಾಲ್ ಹಿಂಸಾಚಾರ ಪ್ರಕರಣ: ಮತ್ತೆ ಏಳು ಮಂದಿ ಆರೋಪಿಗಳ ಬಂಧನ
ಮಸೀದಿ ಸಮೀಕ್ಷೆ ವೇಳೆ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಇನ್ನೂ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ನವೆಂಬರ್ 24 ರ ಸಂಭಾಲ್ ಹಿಂಸಾಚಾರದಲ್ಲಿ ನಾಲ್ವರು ಬಲಿಯಾದ ಘಟನೆಯ ಬಳಿಕ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ.
ಸಂಭಾಲ್ ಹಿಂಸಾಚಾರದಲ್ಲಿ ಮತ್ತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಇಂದು ಬಂಧಿತ ಆರೋಪಿಗಳನ್ನು ಶೋಯೆಬ್, ಸುಜಾವುದ್ದೀನ್, ರಹತ್, ಮೊಹಮ್ಮದ್ ಅಜಂ, ಅಜರುದ್ದೀನ್, ಜಾವೇದ್ ಮತ್ತು ಮುಸ್ತಫಾ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಹೆಚ್ಚಿನ ತಂಡಗಳನ್ನು ರಚಿಸಲಾಗಿದೆ. ಸಂಭಾಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 11 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನವೆಂಬರ್ 24 ರಂದು ಜಾಮಾ ಮಸೀದಿ ಪ್ರದೇಶದ ಬಳಿ ಹಿಂಸಾತ್ಮಕ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 47 ಜನರನ್ನು ಬಂಧಿಸಲಾಗಿದೆ. 91 ಜನರನ್ನು ಇನ್ನೂ ಬಂಧಿಸಬೇಕಾಗಿದೆ. ಇಂದು ಇನ್ನೂ ಏಳು ಜನರನ್ನು ಬಂಧಿಸಲಾಗಿದೆ” ಎಂದು ಎಎಸ್‌ಪಿ ತಿಳಿಸಿದ್ದಾರೆ.
ಲಕ್ನೋದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರ ತಂಡವು ಉತ್ತರ ಪ್ರದೇಶದ ಸಂಭಾಲ್‌ಗೆ ತಲುಪಿದಾಗ, ನವೆಂಬರ್ 24 ರಂದು ಗಲಭೆ ಆರಂಭವಾಗಿ ನಗುಂಡಿನ ದಾಳಿಗೆ ಕಾರಣವಾಯಿತು. ಈ ಘಟನೆಯಿಂದ ನಾಲ್ಕು ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj




























