ಹೃದಯ ವಿದ್ರಾವಕ ಘಟನೆ: ಸಂಪ್ ತೊಳೆಯಲು ಹೋಗಿದ್ದ ತಂದೆ-ಮಗ ವಿದ್ಯುತ್ ಶಾಕ್ ಹೊಡೆದು ಸಾವು - Mahanayaka

ಹೃದಯ ವಿದ್ರಾವಕ ಘಟನೆ: ಸಂಪ್ ತೊಳೆಯಲು ಹೋಗಿದ್ದ ತಂದೆ-ಮಗ ವಿದ್ಯುತ್ ಶಾಕ್ ಹೊಡೆದು ಸಾವು

raju sainath
19/01/2022

ಬೆಂಗಳೂರು: ಸಂಪ್ ತೊಳೆಯಲು ಹೋಗಿದ್ದ ತಂದೆ- ಮಗ ವಿದ್ಯುತ್ ಆಘಾತಕ್ಕೊಳಗಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಆರ್​​ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ನಡೆದಿದೆ.

36 ವರ್ಷ ವಯಸ್ಸಿನ ರಾಜು ಹಾಗೂ ಅವರ ಪುತ್ರ 10 ವರ್ಷ ವಯಸ್ಸಿನ ಸೈನತ್ ಮೃತಪಟ್ಟವರಾಗಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಾಜು ಸಂಪ್ ತೊಳೆಯಲು ಹೋಗಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ತಂದೆಯ ಚೀರಾಟ ಕೇಳಿ ಸಂಪ್ ಬಳಿ ತೆರಳಿದ ಪುತ್ರನಿಗೂ ವಿದ್ಯುತ್ ಶಾಕ್ ಹೊಡೆದಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಆರ್. ಟಿ.ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್‍ ಆಸ್ಪತ್ರೆಗೆ ರವಾನಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೇಕೆಯ ಬದಲು ಮನುಷ್ಯನ ತಲೆ ಕಡಿದ ಕುಡುಕ

ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಸೊಸೆ ಬಿಜೆಪಿಗೆ ಸೇರ್ಪಡೆ

2023ರ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ: ಕಲ್ಲಿನಾಥ ಸ್ವಾಮೀಜಿ ಭವಿಷ್ಯ

ವಿಜಯಪುರ: ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ; ಶಾಸಕರು – ಉಪಾಧ್ಯಕ್ಷರ ಬೆಂಬಲಿಗರ ಮಧ್ಯೆ ವಾಗ್ವಾದ

ಅಮೆರಿಕಕ್ಕೆ ವಿಮಾನಯಾನ ಸೇವೆ ರದ್ದುಗೊಳಿಸಿದ ಏರ್ ​ಇಂಡಿಯಾ

ಇತ್ತೀಚಿನ ಸುದ್ದಿ