ICSE SSLCಯಲ್ಲಿ 92% ಅಂಕ ಗಳಿಸಿದ ಸಮೃದ್ಧ್: ಎಸ್ಪಿ ವಿಕ್ರಂ ಅಮಟೆ,  PSI ದಿಲೀಪ್ ಅವರಿಂದ ಅಭಿನಂದನೆ - Mahanayaka
9:46 AM Saturday 20 - September 2025

ICSE SSLCಯಲ್ಲಿ 92% ಅಂಕ ಗಳಿಸಿದ ಸಮೃದ್ಧ್: ಎಸ್ಪಿ ವಿಕ್ರಂ ಅಮಟೆ,  PSI ದಿಲೀಪ್ ಅವರಿಂದ ಅಭಿನಂದನೆ

samvrudh
20/09/2025

ಕೊಟ್ಟಿಗೆಹಾರ : ಬಣಕಲ್ ನಜರತ್ ಶಾಲೆಯ ವಿದ್ಯಾರ್ಥಿ ಸಮೃದ್ಧ್ ಅವರು ICSE SSLC ಪರೀಕ್ಷೆಯಲ್ಲಿ 92% ಅಂಕ ಗಳಿಸುವ ಮೂಲಕ ಶಾಲೆ ಹಾಗೂ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದ್ದಾರೆ. ಸಮೃದ್ಧ್ ಅವರು ಬಾಳೂರು ಹೆಡ್ ಕಾನ್ಸ್ಟೆಬಲ್ ನಂದೀಶ್ ಅವರ ಪುತ್ರರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರು, “ಪೊಲೀಸ್ ಇಲಾಖೆಯ ಮಕ್ಕಳಲ್ಲಿ ಇಂತಹ ಶೈಕ್ಷಣಿಕ ಸಾಧನೆ ಕಂಡು ಹೆಮ್ಮೆಯಾಗುತ್ತದೆ. ಸಮೃದ್ಧ್ ಅವರ ಪರಿಶ್ರಮ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ,” ಎಂದು ಹೇಳಿದರು.

ಬಾಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಿಲೀಪ್ ಅವರು, “ಸಮೃದ್ಧ್ ಅವರ ಸಾಧನೆ ಪೊಲೀಸ್ ಕುಟುಂಬಕ್ಕೆ ಪ್ರೇರಣೆ. ಭವಿಷ್ಯದಲ್ಲೂ ಇದೇ ರೀತಿಯಾಗಿ ಮೆರುಗನ್ನು ತೋರಲಿ,” ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ, PSI ದಿಲೀಪ್ ಅವರು ಸಮೃದ್ಧ್ ಅವರಿಗೆ 10,000 ರೂ. ಮೌಲ್ಯದ ಫಾಸ್ಟ್‌ಟ್ರಾಕ್ ವಾಚ್ ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ