ಸಮುದ್ರದ ಅಲೆಯುಬ್ಬರ ಪರಿಶೀಲನೆಗೆ ಬಂದಿದ್ದ ಸಚಿವರನ್ನು ಹೊತ್ತೊಯ್ದ ಮೀನುಗಾರರು | ಅಷ್ಟಕ್ಕೂ ನಡೆದದ್ದೇನು ಗೊತ್ತಾ? - Mahanayaka

ಸಮುದ್ರದ ಅಲೆಯುಬ್ಬರ ಪರಿಶೀಲನೆಗೆ ಬಂದಿದ್ದ ಸಚಿವರನ್ನು ಹೊತ್ತೊಯ್ದ ಮೀನುಗಾರರು | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

anitha radhakrishnan
08/07/2021

ಚೆನ್ನೈ: ಸಮುದ್ರದ ಅಲೆಯುಬ್ಬರ ಪರಿಶೀಲನೆಗೆ ಬಂದಿದ್ದ ತಮಿಳುನಾಡಿನ ಮೀನುಗಾರಿಕಾ ಸಚಿವರನ್ನು ಮೀನುಗಾರರು ಹೊತ್ತೊಯ್ದ ಘಟನೆ ನಡೆದಿದ್ದು, ಸಚಿವರ ಶೂ ಒದ್ದೆಯಾಗಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡಲಾಗಿದೆಯಂತೆ!


Provided by

ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್  ಸಮುದ್ರದ ಅಲೆಯುಬ್ಬರದ ಬಗ್ಗೆ ಪರಿಶೀಲನೆ ನಡೆಸಲು ಪಳವೇರ್ಕಾಡುವಿಗೆ ಬಂದಿದ್ದಾರೆ. ಬೋಟ್ ನಲ್ಲಿ ಕುಳಿತು ಪ್ರಯಾಣಿಸಿದ ಅವರು ಸಮುದ್ರದ ದಂಡೆಗೆ ಬಂದಾಗ ನೀರಿಗೆ ಇಳಿದು ದಡಕ್ಕೆ ಬರಬೇಕಾಗಿತ್ತು. ಆದರೆ ತಾನು ಧರಿಸಿದ್ದ ಶೂ ಒದ್ದೆಯಾಗಬಹುದು ಎಂದು ಸಚಿವರು ಬೋಟ್ ನಿಂದ ಕೆಳಗೆ ಇಳಿಯಲೇ ಇಲ್ಲ.

ಸಚಿವರ ಸ್ಥಿತಿ ನೋಡಿದ ಮೀನುಗಾರರು, ಚೇರ್ ಒಂದನ್ನು ಇಟ್ಟು ಇಳಿಯಲು ಸಚಿವರಿಗೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಆದರೂ ಅವರು ಕೆಳಗಡೆ ಇಳಿಯಲು ಹಿಂದೆ ಮುಂದೆ ನೋಡಿದ್ದಾರೆನ್ನಲಾಗಿದೆ. ಕೊನೆಗೆ ಬೇರೆ ಯಾವುದೇ ದಾರಿ ಕಾಣದೇ ಸಚಿವರನ್ನು ಹೊತ್ತುಕೊಂಡು ಬಂದು ಮೀನುಗಾರರು ದಡದಲ್ಲಿ ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ