ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ | ಕೋಮಾ ಸ್ಥಿತಿಯಲ್ಲಿರುವ ನಟ, ಉಸಿರಾಟವೂ ಕ್ಷೀಣಿಸುತ್ತಿದೆ - Mahanayaka
2:06 PM Thursday 18 - September 2025

ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ | ಕೋಮಾ ಸ್ಥಿತಿಯಲ್ಲಿರುವ ನಟ, ಉಸಿರಾಟವೂ ಕ್ಷೀಣಿಸುತ್ತಿದೆ

sanchari vijay
14/06/2021

ಬೆಂಗಳೂರು: ಬೈಕ್ ಸ್ಕಿಡ್ ಆಗಿ ತಲೆ ಹಾಗೂ ತೊಡೆಗೆ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ತಿಳಿದು ಬಂದಿದೆ.


Provided by

ಸಂಚಾರಿ ವಿಜಯ್ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದೆ ಎಂದು ಹೇಳಲಾಗುತ್ತಿದೆ. ಅಪೊಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕ್ ಅವರು ಕೂಡ ಸಂಚಾರಿ ವಿಜಯ್ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಅವರು ರಿಕವರಿಯಾಗುವ ಸಾಧ್ಯತೆಗಳು ತೀರಾ ಕಡಿಮೆ ಇದೆ ಎಂದು ಕುಟುಂಬದ ಸದಸ್ಯರಿಗೂ ತಿಳಿಸಲಾಗಿದೆ ಎಂದು ಹೇಳಲಾಗಿದೆ.

ಜೂನ್ 12ರ ರಾತ್ರಿ ಜೆಪಿ ನಗರದಲ್ಲಿ ಸಂಚಾರಿ ವಿಜಯ್ ಅವರು ಸ್ನೇಹಿತ ನವೀನ್ ಜೊತೆಗೆ ಮನೆಗೆ ಬೈಕ್ ನಲ್ಲಿ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು, ಅಪಘಾತಕ್ಕೆ ಈಡಾಗಿದ್ದರು. ಇದರಿಂದಾಗಿ ಅವರ ತಲೆಗೆ ಹಾಗೂ ತೊಡೆಗೆ ತೀವ್ರವಾದ ಏಟು ಬಿದ್ದಿತ್ತು. ಅವರ ತೊಡೆಯ ಮೂಳೆ ಮುರಿತವಾಗಿದೆ.

ಸದ್ಯ ವೈದ್ಯರು ಅವರ ಮೆದುಳಿನಲ್ಲಿ ಆಗುತ್ತಿದ್ದ ರಕ್ತಸ್ರಾವವನ್ನು ಸರಿಪಡಿಸಿದ್ದಾರೆ. ಆದರೆ, ಅವರು ಇನ್ನೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗಿದೆ.  ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದು, ಅವರು ಕೋಮಾ ಸ್ಥಿತಿಯಲ್ಲಿದ್ದಾರೆ. ಅವರ ಬ್ರೇನ್ ಫಂಕ್ಷನ್ ಸ್ಥಗಿತವಾಗುತ್ತಿದೆ. ಉಸಿರಾಟ ಕೂಡ ಕ್ಷೀಣಿಸುತ್ತಿದೆ. ಆದರೆ ದೈಹಿಕವಾಗಿ ಆರೋಗ್ಯವಾಗಿದ್ದಾರೆ

ಇತ್ತೀಚಿನ ಸುದ್ದಿ