ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇನ್ನಿಲ್ಲ - Mahanayaka

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇನ್ನಿಲ್ಲ

bappi11
16/02/2022


Provided by

ಮುಂಬೈ: ಬಾಲಿವುಡ್‍ನ ಹಿರಿಯ ಗಾಯಕ, ಸಂಗೀತ ನಿದೇರ್ಶಕ ಬಪ್ಪಿ ಲಹರಿ ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಒಂದು ತಿಂಗಳಿಂದ ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಮನೆಗೆ ತೆರಳಿದ ನಂತರ ಮಂಗಳವಾರ ಮತ್ತೆ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಪ್ಪಿ ಲಹಿರಿ ಮೃತಪಟ್ಟಿದ್ದಾರೆ.

ಬಾಲಿವುಡ್‍ನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಅವರು, 1970-80ರ ದಶಕದಲ್ಲಿ ಸದ್ದು ಮಾಡಿದ್ದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಬಪ್ಪಿ ಲಹರಿಯವರ ಕಂಠದಲ್ಲಿ ಮೂಡಿಬಂದಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರೈಲು ಹಳಿಯ ಮೇಲೆ ನಿಂತು ಸೆಲ್ಫಿ: ನಾಲ್ವರು ಯುವಕರ ದುರ್ಮರಣ

ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

ಕೆಂಪುಕೋಟೆ ಗಲಭೆಯ ಪ್ರಮುಖ ಆರೋಪಿ ಸಿಧು ಅಪಘಾತದಲ್ಲಿ ಸಾವು!

ಅಮ್ಮನ ಸಾವಿಗೆ ಕಾರಣವಾದ ಮಗಳ ವಾಟ್ಸಾಪ್ ಸ್ಟೇಟಸ್‌

ಇತ್ತೀಚಿನ ಸುದ್ದಿ