ವಿವಾಹ ವಿಚ್ಛೇದನದ ಬಳಿಕ ಮೊದಲ ಬಾರಿ ಫೋಟೋ ಹಂಚಿಕೊಂಡ ಸಾನಿಯಾ ಮಿರ್ಜಾ - Mahanayaka

ವಿವಾಹ ವಿಚ್ಛೇದನದ ಬಳಿಕ ಮೊದಲ ಬಾರಿ ಫೋಟೋ ಹಂಚಿಕೊಂಡ ಸಾನಿಯಾ ಮಿರ್ಜಾ

sania mirza
26/01/2024


Provided by

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಗೆ ವಿವಾಹ ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಭಾವನಾತ್ಮಕ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

14 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿರುವ ಸಾನಿಯಾ ಮಿರ್ಜಾ, ಮೊದಲ ಬಾರಿಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಕನ್ನಡಿ ಮುಂದೆ ನಿಂತಿರುವ ಈ ಫೋಟೋಗೆ ಪ್ರತಿಬಿಂಬ ಎಂಬ ಕ್ಯಾಪ್ಷನ್ ನೀಡಿದ್ದಾರೆ.

ಸಾನಿಯಾ ಮಿರ್ಜಾ ಅವರ ಫೋಟೋಗೆ ಮಿಶ್ರ ಅಭಿಪ್ರಾಯಗಳನ್ನು ಬಳಸಿ ಸಾಮಾಜಿಕ ಜಾಲತಾಣ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಸಾನಿಯಾ ಮತ್ತು ಮಲ್ಲಿಕ್ ದಂಪತಿಗೆ  6 ವರ್ಷದ ಮಗನಿದ್ದಾನೆ. ಸದ್ಯ ಮಗ ಸಾನಿಯಾ ಮಿರ್ಜಾ ಅವರ ಜೊತೆಗಿದ್ದಾನೆ. ಇನ್ನೊಂದೆಡೆ ಶೋಯೆಬ್ ಪಾಕ್ ತಾರೆ ಸನಾ ಜಾವೇದ್ ಎಂಬಾಕೆಯನ್ನು  ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ.

ಇತ್ತೀಚಿನ ಸುದ್ದಿ