ಸರ ಸುಲಿಗೆ ಮಾಡುತ್ತಿದ್ದ 3 ಮಂದಿ ಅರೆಸ್ಟ್: ಆರೋಪಿಗಳ ಹಿಸ್ಟ್ರಿ ಹೇಗಿದೆ ಗೊತ್ತಾ? - Mahanayaka
1:06 AM Wednesday 27 - August 2025

ಸರ ಸುಲಿಗೆ ಮಾಡುತ್ತಿದ್ದ 3 ಮಂದಿ ಅರೆಸ್ಟ್: ಆರೋಪಿಗಳ ಹಿಸ್ಟ್ರಿ ಹೇಗಿದೆ ಗೊತ್ತಾ?

3 arrest
06/09/2022


Provided by

ಮಂಗಳೂರು: ನಗರದ ವಿವಿಧ ಕಡೆಗಳಲ್ಲಿ ಮಹಿಳೆಯ ಸರ ಸುಲಿಗೆ ಮಾಡುತ್ತಿದ್ದ 3 ಮಂದಿ ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಜಗದೀಶ್ ಶೆಟ್ಟಿ, ಸುಜಿತ್ ಶೆಟ್ಟಿ, ಸುರೇಶ್ ರೈ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಲಿಗೆ ಮಾಡಿದ ಸುಮಾರು 90 ಗ್ರಾಂ ತೂಕದ  ಚಿನ್ನಾಭರಣಗಳನ್ನು,  2 ಸ್ಕೂಟರ್ ಮತ್ತು 3 ಮೊಬೈಲ್  ಗಳನ್ನು  ಒಟ್ಟು 5 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರದಲ್ಲಿ ಆಗಸ್ಟ್ ತಿಂಗಳಲ್ಲಿ  ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಪ್ರಕರಣ ಮತ್ತು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ 1 ಸರ ಸುಲಿಗೆ    ಪ್ರಕರಣ ದಾಖಲಾಗಿತ್ತು. ಆಗಸ್ಟ್ 14 ರಂದು  ಮಂಗಳೂರು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಪುಣೆ ಮೂಲದ ಮಹಿಳೆಯ ಸರ ಕಳ್ಳತನ ಆಗಿತ್ತು. ಅನಂತರ ಆಗಸ್ಟ್ 24ರಂದು ಕದ್ರಿ ಠಾಣೆ ವ್ಯಾಪ್ತಿ  ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಪ್ಯಾಕ್ಟರಿಯ  ರಸ್ತೆಯಲ್ಲಿ ಮಹಿಳೆಯ ಸರ ಸುಲಿಗೆ ಪ್ರಕರಣ ದಾಖಲಾಗಿದೆ. ಹಾಗೂ ಆಗಸ್ಟ್ 25 ರಂದು ಮಂಗಳೂರು ನಗರ ಕಂಕನಾಡಿ ಪೊಲೀಸ್ ಠಾಣೆಯ  ಶಕ್ತಿನಗರದ ರಾಜೀವ ನಗರದಲ್ಲಿ ಮಹಿಳೆ ಸರ ಸುಲಿಗೆ ನಡೆದಿತ್ತು.

ಈ ಸರ ಸುಲಿಗೆ ಮಾಡಿದ ಆರೋಪಿಗಳು ಪತ್ತೆ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು  ಸಿಸಿಬಿ ಅಧಿಕಾರಿ/ಸಿಬ್ಬಂದಿಯವರು ಪತ್ತೆ ಕಾರ್ಯ ನಡೆಸಿ  ಮಹಿಳೆಯ ಸರ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ  3 ಜನ ಆರೋಪಿಗಳನ್ನು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದವರನ್ನು ಮಾಹಿತಿ ಮೇರೆಗೆ  ದಸ್ತಗಿರಿ ಮಾಡಿದ್ದಾರೆ. ಆರೋಪಿಗಳ ಪೈಕಿ ಜಗದೀಶ್ ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಸುರೇಶ್ ರೈ ಟೆಂಪೋ ಚಾಲಕನಾಗಿದ್ದಾನೆ.

ಸುಜಿತ್ ಶೆಟ್ಟಿ ಎಂಬಾತನು  ಮಂಗಳೂರಿನಲ್ಲಿ 2002 ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿಗಳಿಂದ       ಸುಮಾರು 40.300 ಗ್ರಾಂ ತೂಕದ ಚಿನ್ನದ ಮಹಾರಾಷ್ಟ್ರಿ ಮಾಂಗಲ್ಯ ಸರ, ಸುಮಾರು 16 ಗ್ರಾಂ ತೂಕದ ಚಿನ್ನದ ಸರ, ಸುಮಾರು 33.600 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಓಪ್ಪೋ ಕಂಪನಿಯ ಸ್ಮಾರ್ಟ್ ಮೊಬೈಲ್, ಸಾಮ್ ಸಂಗ್  ಕಂಪನಿಯ ಸ್ಮಾರ್ಟ್ ಮೊಬೈಲ್, ನೋಕಿಯಾ ಕಂಪನಿಯ ಕೀಪ್ಯಾಡ್ ಮೊಬೈಲ್, ಸುಜುಕಿ ಬರ್ಗ್ ಮೆನ್ ಸ್ಟ್ರೀಟ್ ಸ್ಕೂಟರ್, ಹೋಂಡ ಆಕ್ಟಿವಾ ಮಾದರಿ ಸ್ಕೂಟರ್, ಹೆಲ್ಮಟ್, ರೈನ್ ಕೋಟ್ ವಶಪಡಿಸಿಕೊಳ್ಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ