ಸರಣಿ ಅಪಘಾತ: ಹೆದ್ದಾರಿಯಲ್ಲಿಯೇ 5 ಮಂದಿಯ ದಾರುಣ ಸಾವು - Mahanayaka
12:04 AM Friday 19 - December 2025

ಸರಣಿ ಅಪಘಾತ: ಹೆದ್ದಾರಿಯಲ್ಲಿಯೇ 5 ಮಂದಿಯ ದಾರುಣ ಸಾವು

16/02/2021

ಮುಂಬೈ:  ಸರಣಿ ಅಪಘಾತದಲ್ಲಿ  ಐವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಕೋಪೋಲಿ ಬಳಿಯಲ್ಲಿ ನಡೆದಿದ್ದು, ನಿನ್ನೆ ತಡ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.

ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಚಲಿಸುತ್ತಿದ್ದ ಸಂದರ್ಭದಲ್ಲಿ ಒಂದಕ್ಕೊಂದು ವಾಹನಗಳು ಡಿಕ್ಕಿ ಹೊಡೆದುಕೊಂಡಿದ್ದು, ಇದರಿಂದಾಗಿ ಐವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಕೆಲವರಿಗೆ ತೀವ್ರ ತರಹದ ಗಾಯಗಳಾಗಿವೆ.

ಇಲ್ಲಿನ ಖಲ್ಲಾಪುರದ ಟೋಲ್ ಫ್ಲಾಜಾ ಬಳಿಯಲ್ಲಿ ಎರಡು ಟ್ರಕ್  ಮತ್ತು ಕಾರಿಗೆ ಗೂಡ್ಸ್ ವಾಹನ ಹಿಂದಿನಿಂದ ಡಿಕ್ಕಿಯಾಗಿದೆ. ವೇಗವಾಗಿ ಬರುತ್ತಿದ್ದ ಟ್ರಕ್ ನಿಯಂತ್ರಣ ಕಳೆದುಕೊಂಡಿದ್ದು ಮುಂದೆ ಇದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ