ಸರ್ಕಾರಿ ಶಾಲೆಗೆ ಬೆಂಕಿ: ಅಮೂಲ್ಯ ವಸ್ತುಗಳು ಸುಟ್ಟು ಭಸ್ಮ! - Mahanayaka
12:30 PM Tuesday 21 - October 2025

ಸರ್ಕಾರಿ ಶಾಲೆಗೆ ಬೆಂಕಿ: ಅಮೂಲ್ಯ ವಸ್ತುಗಳು ಸುಟ್ಟು ಭಸ್ಮ!

13/03/2021

ರಾಯಚೂರು: ಸರ್ಕಾರಿ ಶಾಲೆಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ  ದೇವದುರ್ಗದ ಜಾಲಹಳ್ಳಿಯಲ್ಲಿ ನಡೆದಿದ್ದು, ಇದರ ಪರಿಣಾಮ ಶಾಲೆಯಲ್ಲಿದ್ದ ಅಮೂಲ್ಯ ವಸ್ತುಗಳು ಸುಟ್ಟು ಹೋಗಿವೆ.

ಜಾಲಹಳ್ಳಿಯ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಶಾಲೆಯಲ್ಲಿ ಬಡ ಮಕ್ಕಳ ಊಟಕ್ಕಾಗಿ ತಂದಿಟ್ಟಿದ್ದ ದವಸ ಧಾನ್ಯ, 10  ಬೈಸಿಕಲ್, ಪುಸ್ತಕಗಳು, 35 ಚೀಲ ಅಕ್ಕಿ, ನೋಟ್ ಪುಸ್ತಕ ಸುಟ್ಟು ಹೋಗಿವೆ.

ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ. ಬೆಳಗ್ಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.  ಸರ್ಕಾರಿ ಶಾಲೆಯಿಂದ ಹೊಗೆ ಬರುವುದನ್ನು ಗಮನಿಸಿದ ಮುಖ್ಯೋಪಾಧ್ಯಾಯರು ಹಾಗೂ ಅಗ್ಲಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅವಘಡ ಕುರಿತಾಗಿ ಮುಖ್ಯೋಪಾಧ್ಯಾಯ ಶಾಕೀಲ್ ಸಾಬ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ