ಶಾರೂಖ್ ಖಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ನಯನತಾರಾ - Mahanayaka

ಶಾರೂಖ್ ಖಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ನಯನತಾರಾ

nayanathra
09/04/2022

ಶಾರುಖ್ ಖಾನ್ ಅಭಿನಯದ ಅಟ್ಲಿ ನಿರ್ದೇಶನದ ಅಟ್ಲಿ-ಶಾರುಖ್ ಖಾನ್ ಚಿತ್ರವು ಘೋಷಣೆಯಾದಾಗಿನಿಂದ ಸಾಕಷ್ಟು ಗಮನ ಸೆಳೆದಿದೆ.ಹೆಸರಿಡದ ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಮುಖ್ಯ ಪಾತ್ರದಲ್ಲಿದ್ದು ಚಿತ್ರದ ಶೂಟಿಂಗ್ ಕಳೆದ ಸೆಪ್ಟೆಂಬರ್‌ ನಲ್ಲಿ ಪ್ರಾರಂಭವಾಯಿತು.ಈಗ ನಯನತಾರಾ ಶೂಟಿಂಗ್ ಅನ್ನು ಪುನರಾರಂಭಿಸಲು ಮುಂಬೈಗೆ ಆಗಮಿಸಿದ್ದಾರೆ.

ಈ ಚಿತ್ರವು ಅಟ್ಲೀ ಅವರ ಬಾಲಿವುಡ್‌ ನ ಚೊಚ್ಚಲ ಚಿತ್ರವಾಗಿದ್ದು,  ಕಿಂಗ್ ಖಾನ್ ಅವರನ್ನು ಚಿತ್ರದಲ್ಲಿ ‘ರಾ’ (ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಅಧಿಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರಂಭಿಕ ವರದಿಗಳು ತಿಳಿಸಿವೆ.  ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಶಾರುಖ್ ಖಾನ್ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಜೊತೆಗೆ ಪ್ರಿಯಾಮಣಿ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕ್ರಿಸ್‌ಮಸ್ 2018ಕ್ಕೆ ಬಿಡುಗಡೆಯಾದ ‘ಝೀರೋ’ ಚಿತ್ರದ ನಂತರ ಶಾರುಖ್ ಖಾನ್ ಸಿನಿಮಾದಿಂದ ವಿರಾಮ ತೆಗೆದುಕೊಂಡಿದ್ದರು.ಸಿದ್ಧಾರ್ಥ್ ಆನಂದ್ ಅವರ ‘ಪತ್ತಾಣ್’ ಅವರು ಪೂರ್ಣಗೊಳಿಸಬೇಕಾದ ಮತ್ತೊಂದು ಚಿತ್ರ.  ದೀಪಿಕಾ ಪಡುಕೋಣೆ ನಾಯಕಿಯಾಗಿರುವ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಲೆಯ ಬಳಿ ಗುಂಡಿನ ದಾಳಿ: ಓರ್ವ ವಿದ್ಯಾರ್ಥಿ ಸಾವು

ಎಟಿಎಂನಿಂದ ಹಣ ಡ್ರಾ ಮಾಡಬೇಕಾದರೆ ಕಾರ್ಡ್ ಬೇಕಾಗಿಲ್ಲ!: ಏನಿದು ಕಾರ್ಡ್ ಲೆಸ್ ಕ್ಯಾಶ್?

ಯೋಗಿ ಆದಿತ್ಯನಾಥ್ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಕಾರ್ಟೂನ್! | ರಾತ್ರೋ ರಾತ್ರಿ ನಡೆದದ್ದೇನು?

ಅಸಾರಾಂ ಬಾಪು ಬೆಂಬಲಿಗರ ಆಶ್ರಮದ ಬಳಿ ಬಾಲಕಿಯ ಮೃತದೇಹ ಪತ್ತೆ!

ರೈಲು ಹಳಿಯ ಬಳಿ ನಿಂತು ಸೆಲ್ಫಿ: ಮೂವರು ಯುವಕರ ದಾರುಣ ಸಾವು

 

ಇತ್ತೀಚಿನ ಸುದ್ದಿ