ಮಕ್ಕಾದಲ್ಲಿ ಯೋಗ ಚಾಂಪಿಯನ್ ಶಿಪ್ ಆಯೋಜಿಸಿ ಅಚ್ಚರಿ ಸೃಷ್ಟಿಸಿದ ಸೌದಿ ಅರೇಬಿಯಾ - Mahanayaka

ಮಕ್ಕಾದಲ್ಲಿ ಯೋಗ ಚಾಂಪಿಯನ್ ಶಿಪ್ ಆಯೋಜಿಸಿ ಅಚ್ಚರಿ ಸೃಷ್ಟಿಸಿದ ಸೌದಿ ಅರೇಬಿಯಾ

01/02/2024


Provided by

ಸೌದಿ ಅರೇಬಿಯಾದ ಮಕ್ಕಾದಲ್ಲಿ ಎರಡನೇ ಸೌದಿ ಮುಕ್ತ ಯೋಗ ಚಾಂಪಿಯನ್‌ಶಿಪ್ ನಡೆಯಿತು. ಜನವರಿ 27ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಬಾಲಕಿಯರು ಹಾಗೂ 10ಕ್ಕೂ ಹೆಚ್ಚು ಬಾಲಕರು ಭಾಗವಹಿಸಿದ್ದರು.

ಈ ಯೋಗ ಕಾರ್ಯಕ್ರಮ ಸೌದಿ ಅರೇಬಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಜಿದ್ದಾ, ಮಕ್ಕಾ, ಮದೀನಾ, ತೈಫ್ ಮತ್ತು ಇತರ ನಗರಗಳಿಂದ ಈ ಯೋಗ ಚಾಂಪಿಯನ್‌ಶಿಪ್​​ನಲ್ಲಿ ಭಾಗವಹಿಸುತ್ತಿದ್ದಾರೆ. ಇದು ಪ್ರಾಚೀನ ವೈವಿಧ್ಯಮಯ ವಿಚಾರಗಳಿಗೆ ಸಾಕ್ಷಿಯಾಗುತ್ತಿದೆ. ಈ ಯೋಗ ಚಾಂಪಿಯನ್‌ಶಿಪ್ ಕಾರ್ಯಕ್ರಮ ಸೌದಿ ಅರೇಬಿಯಾ ಒಲಿಂಪಿಕ್ ಸಮಿತಿ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ನಡೆಯಿತು.ಯೋಗವನ್ನು ಕಾನೂನುಬದ್ಧ ಕ್ರೀಡಾ ಚಟುವಟಿಕೆಯಾಗಿ ಅಧಿಕೃತವಾಗಿ ಗುರುತಿಸುವ ಸಂಕೇತವಾಗಿದೆ ಎಂದು ಹೇಳಿದೆ.

ಈ ಕಾರ್ಯಕ್ರಮದಲ್ಲಿ ಸೌದಿ ಯೋಗ ಸಮಿತಿಯ ಅಧ್ಯಕ್ಷ ನೌಫ್ ಅಲ್-ಮರ್ವಾಯಿ ಅವರು ಉಪಸ್ಥಿತರಿದ್ದರು. ಈ ಯೋಗ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸುವಲ್ಲಿ ಮಹತ್ವವನ್ನು ಪಡೆದಿದೆ ಎಂದು ಹೇಳಿದ್ದಾರೆ. ಭಾರತದ ಕಾನ್ಸುಲ್ ಜನರಲ್ ಮೊಹಮ್ಮದ್ ಶಾಹಿದ್ ಆಲಂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ರೀತಿಯ ಕಾರ್ಯಕ್ರಮಗಳು ಭಾರತ ಮತ್ತು ಸೌದಿ ನಡುವೆ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿ ಎಂದು ಹೇಳಿದ್ದಾರೆ. ಯೋಗದಿಂದ ಭಾರತದೊಂದಿಗಿನ ಸಂಬಂಧ ಮಾತ್ರವಲ್ಲ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನ ಕಾಪಾಡುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ