ಸೌದಿಯಲ್ಲಿ ಗಲ್ಲು ಶಿಕ್ಷೆ ವಿಚಾರ: ಕೇರಳದ ವ್ಯಕ್ತಿ ಬಿಡುಗಡೆ ಪ್ರಕ್ರಿಯೆ ಚುರುಕು

ಸೌದಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ಅಬ್ದುಲ್ ರಹೀಮ್ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಸಂತ್ರಸ್ತ ಕುಟುಂಬದ ಪರ ವಕೀಲರ ಶುಲ್ಕವು ಸೌದಿಗೆ ತಲುಪಿದೆ. ರಿಯಾದ್ ನಲ್ಲಿರುವ ರಾಯಭಾರ ಕಚೇರಿಯ ಅಕೌಂಟಿಗೆ ಸುಮಾರು ಒಂದುವರೆ ಕೋಟಿ ರೂಪಾಯಿಯನ್ನು ತಲುಪಿಸಲಾಗಿದೆ.
ಗವರ್ನರೇಟ್ ನಿಂದ ಪತ್ರ ತಲುಪಿದೊಡನೆ ಕೋರ್ಟು ಬಿಡುಗಡೆಯ ಪ್ರಕ್ರಿಯೆ ಯನ್ನು ಪೂರ್ತಿಗೊಳಿಸಲಿದೆ. ಈ ಪತ್ರಕ್ಕಾಗಿ ಸಂತ್ರಸ್ತರು ಮತ್ತು ಅಬ್ದುಲ್ ರಹೀಂ ಕಡೆಯವರು ಬೇಗನೆ ಗವರ್ನರೇಟರನ್ನು ಜೊತೆಯಾಗಿ ಹೋಗಿ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಪರಿಹಾರ ಮೊತ್ತಕ್ಕೆ ಬದಲಿಯಾಗಿ ರಹೀಮ್ ರನ್ನು ಕ್ಷಮಿಸುವುದಾಗಿ ಈಗಾಗಲೇ ಸಂತ್ರಸ್ತ ಕುಟುಂಬ ಹೇಳಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆಗೆ ಯಾವುದೇ ತಡೆಯೂ ಇಲ್ಲ ಎಂದು ವರದಿಯಾಗಿದೆ.ಆದರೆ ನ್ಯಾಯಾಲಯ ರಹೀಮ್ ರನ್ನು ಬಿಡುಗಡೆಗೊಳಿಸಬೇಕಾದರೆ ಗವರ್ನರೇಟ್ ನಿಂದ ಅನುಮತಿ ಬೇಕಾಗುತ್ತದೆ. ಗವರ್ನರೆಟ್ ಅನುಮತಿ ನೀಡಬೇಕಾದರೆ ಪರಿಹಾರ ಮೊತ್ತದ ಚೆಕ್ ನ ಕಾಫಿ ಮತ್ತು ದಾಖಲೆಗಳು ಬೇಕಾಗುತ್ತದೆ. ಅದರ ಜೊತೆಗೆ ಸಂತ್ರಸ್ತ ಕುಟುಂಬದ ಒಪ್ಪಿಗೆಯ ಪತ್ರವು ಬೇಕಾಗುತ್ತದೆ. ಇದೀಗ ಬಹುತೇಕ ಎಲ್ಲವೂ ನಿರೀಕ್ಷಿಸಿದಂತೆಯೇ ಸಾಗುತ್ತಿದ್ದು ಅತಿ ಶೀಘ್ರ ಅಬ್ದುಲ್ ರಹೀಮ್ ಅವರ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth