ಬಿಜೆಪಿಗರೇ ಸಾವರ್ಕರ್ ನ್ನು ಒಪ್ಪುವುದೇ ಆದರೆ ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಿ: ಹಿಂದೂ ಮಹಾಸಭಾ ಸವಾಲು - Mahanayaka

ಬಿಜೆಪಿಗರೇ ಸಾವರ್ಕರ್ ನ್ನು ಒಪ್ಪುವುದೇ ಆದರೆ ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಿ: ಹಿಂದೂ ಮಹಾಸಭಾ ಸವಾಲು

hindu mahasabha
24/08/2022


Provided by

ಮಂಗಳೂರು: ಬಿಜೆಪಿಗರೇ ನೀವು ನಿಜವಾಗಿ ಸಾರ್ವಕರ್‌ ನ್ನು ಒಪ್ಪುತ್ತೀರಂದ್ರೆ ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ಎಂದು ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು ಹಾಕಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ–ಕಾಂಗ್ರೆಸ್‌ ತಮ್ಮ ತಮ್ಮೊಳಗೆ ಸಾವರ್ಕರ್‌ ರನ್ನು ಯಾಕೆ ಎಳೆದು ತರ್ತೀರಾ? ಎಂದು ಪ್ರಶ್ನಿಸಿದರು.

ಬಿಜೆಪಿಗರೇ ನೀವು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ವಾ?  ಹಾಗಾದರೆ ಸಿದ್ದರಾಮಯ್ಯನನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ ಎಂದ ಅವರು, ಒಂದು ಮೊಟ್ಟೆ ಒಡೆದದ್ದಕ್ಕೆ ಹೆದರಿ ಓಡಿ ಬಂದ ಸಿದ್ದರಾಮಯ್ಯ, ವೀರ ಸಾವರ್ಕರ್‌ ಬಗ್ಗೆ ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾವರ್ಕರ್‌ ನ ಒಂದು ಅಂಶ ಶಿಕ್ಷೆ ಸಿದ್ದರಾಮಯ್ಯ ಪಡೆದಿದ್ದರೆ ಅವರುಇತಿಹಾಸದಲ್ಲೇ ಇರ್ತಾ ಇರಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಗರಿಗೆ ಟಿಪ್ಪುವಿನ ಜಯಂತಿ ಮಾಡುವಾಗ ಸಾವರ್ಕರ್‌ ನೆನಪಾಗಿಲ್ವಾ? ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಯಾಕೆ ನೀವು ಸಾರ್ವಕರ್‌ ವಿಷಯ ಪ್ರಸ್ತಾಪಿಸುವುದಿಲ್ಲ ಎಂದು ಪ್ರಶ್ನಿಸಿದರು.

ಸಾವರ್ಕರ್‌ ನಾಲಿಗೆಯ ಚಪಲದ ವಸ್ತುವಾಗಬಾರದು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅವರು ಸದ್ಯದಲ್ಲೇ ಸಿದ್ದರಾಮಯ್ಯ ವಿರುದ್ಧ ಕೇಸು ದಾಖಲಿಸುತ್ತೇವೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ