SBI ಗ್ರಾಹಕರಿಗೆ ಸಿಹಿ ಸುದ್ದಿ | ಮನೆಯಲ್ಲಿಯೇ ಕುಳಿತು ಖಾತೆ ತೆರೆಯಿರಿ - Mahanayaka
10:33 PM Tuesday 16 - September 2025

SBI ಗ್ರಾಹಕರಿಗೆ ಸಿಹಿ ಸುದ್ದಿ | ಮನೆಯಲ್ಲಿಯೇ ಕುಳಿತು ಖಾತೆ ತೆರೆಯಿರಿ

sbi kyc
24/04/2021

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಕೊವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹೊಸದಾಗಿ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಆಸಕ್ತರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ.


Provided by

ದೇಶಾದ್ಯಂತ  ಕೊರೊನಾ ತಾಂಡವವಾಡುತ್ತಿದ್ದು, ಇದೇ ಸಂದರ್ಭದಲ್ಲಿ ಬ್ಯಾಂಕ್ ಶಾಖೆಗೆ ತೆರಳಿ ಬ್ಯಾಂಕ್ ಖಾತೆ ತೆರೆಯುವುದು ಕಷ್ಟಕರವಾಗಿದೆ. ಹಾಗಾಗಿ ವಿಡಿಯೋ ಕೆವೈಸಿ ಮೂಲಕ ಹೊಸ ಗ್ರಾಹಕರಿಗೆ ಉಳಿತಾಯ ಖಾತೆ ತೆರೆಯುವ ಅವಕಾಶವನ್ನು ನೀಡಿದೆ.

ದೇಶದ ಅತೀ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಎಸ್ ಬಿಐ ಇದೀಗ ಸಂಪರ್ಕವಿಲ್ಲದ ಡಿಕಿಟಲ್ ಉಪಕ್ರಮ ಹಾಗೂ ಕಾಗದ ರಹಿತ ಪ್ರಕ್ರಿಯೆಯ ಮೂಲಕ ಕೆವೈಸಿ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.  ಕಳೆದ ವರ್ಷದಿಂದ ಅನೇಕ ಬ್ಯಾಂಕ್ ಗಳು ಕೆವೈಸಿ ಮಾಡುವ ಆಯ್ಕೆಯನ್ನು ನೀಡಿದ್ದವು. ಈ ಮೂಲಕ ಖಾತೆ ತೆರೆಯಲು ಬ್ಯಾಂಕ್ ಗೆ ಹೋಗುವ ಬದಲು ಮನೆಯಲ್ಲಿಯೇ ಕುಳಿತು ಗ್ರಾಹಕರು ಖಾತೆ ತೆರೆಯಬಹುದಾಗಿದೆ.

ಯೊನೊ ಅಪ್ಲಿಕೇಶನ್‌ನಿಂದ ನೀವು ವೀಡಿಯೋ ಕೆವೈಸಿ ಮಾಡಬಹುದು. ನೀವು ಮಾಡಬೇಕಿರುವುದಿಷ್ಟೆ.  ಮೊದಲು ನಿಮ್ಮ ಫೋನ್‌ನಲ್ಲಿ ಯೋನೊ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ‘New to SBI’ ಕ್ಲಿಕ್ ಮಾಡಿ ಮತ್ತು ಇನ್‌ಸ್ಟಾ ಪ್ಲಸ್ ಉಳಿತಾಯ ಖಾತೆಯನ್ನು ಆಯ್ಕೆ ಮಾಡಿ. ನಂತರ, ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ. ಆಧಾರ್ ದೃಢೀಕರಣ ಪೂರ್ಣಗೊಂಡ ನಂತರ, ಬಳಕೆದಾರರು ವೈಯಕ್ತಿಕ ವಿವರಗಳನ್ನು ನಮೂದಿಸಬೇಕಾಗುತ್ತದೆ. ಬಳಿಕ, ಗ್ರಾಹಕರು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವೀಡಿಯೊ ಕರೆಯನ್ನು ನಿಗದಿಪಡಿಸಬೇಕು. ವೀಡಿಯೊ ಕೆವೈಸಿ ಪೂರ್ಣಗೊಂಡ ನಂತರ ಎಸ್‌ ಬಿಐನಲ್ಲಿನ ಖಾತೆ ಸ್ವಯಂಚಾಲಿತವಾಗಿ ತೆರೆಯುತ್ತದೆ.

ಇತ್ತೀಚಿನ ಸುದ್ದಿ