ಕೋಟಾ ಶ್ರೀನಿವಾಸ ಪೂಜಾರಿ ಗೆಲುವಿಗೆ ರಕ್ತದಾನ ಮಾಡಿದ ಎಸ್.ಸಿ.ಮೋರ್ಚಾ ರಾಜ್ಯ ವಕ್ತಾರ - Mahanayaka
12:24 AM Monday 10 - November 2025

ಕೋಟಾ ಶ್ರೀನಿವಾಸ ಪೂಜಾರಿ ಗೆಲುವಿಗೆ ರಕ್ತದಾನ ಮಾಡಿದ ಎಸ್.ಸಿ.ಮೋರ್ಚಾ ರಾಜ್ಯ ವಕ್ತಾರ

chikamagalore
03/04/2024

ಚಿಕ್ಕಮಗಳೂರು : ಕೋಟಾ ಶ್ರೀನಿವಾಸ ಪೂಜಾರಿ ಗೆಲುವಿಗಾಗಿ ಎಸ್.ಸಿ.ಮೋರ್ಚಾ ರಾಜ್ಯ ವಕ್ತಾರ ಶೃಂಗೇರಿ ಶಿವಣ್ಣ ಎಂಬವರು ರಕ್ತದಾನ ಮಾಡಿದ್ದಾರೆ.

ಪರಿಶುದ್ಧ ವ್ಯಕ್ತಿತ್ವದ ಕೋಟಾ ಗೆಲುವಿಗಾಗಿ ಹಾರೈಸಿ ರಕ್ತದಾನ ಮಾಡಿರುವುದಾಗಿ ಹೇಳಿರುವ ಅವರು, ಕೋಟಾ ಶ್ರೀನಿವಾಸ ಪೂಜಾರಿ ಗೆದ್ದರೆ ಪ್ರಧಾನಿ ಮೋದಿ ಗೆದ್ದಂತೆ ಎಂದು ಹೇಳಿದ್ದಾರೆ.

ಕೋಟಾ ನಾಮಪತ್ರ ಸಲ್ಲಿಸುವ ವೇಳೆಯೇ ರಕ್ತದಾನ ಮಾಡಿದ್ದು, ಅವರ ಗೆಲುವಿಗೆ ಶುಭ ಹಾರೈಸಿದ್ದಾರೆ. ಶೃಂಗೇರಿ ಮಠದ ಆಸ್ಪತ್ರೆ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರು ರಕ್ತದಾನ ಮಾಡಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ