ಎಸ್ ಸಿ, ಎಸ್ ಟಿ ಸಮುದಾಯಗಳ ಮೇಲಿನ ದೌರ್ಜನ್ಯದಲ್ಲಿ ಏರಿಕೆ | ಕೇಂದ್ರ ಸರ್ಕಾರ - Mahanayaka

ಎಸ್ ಸಿ, ಎಸ್ ಟಿ ಸಮುದಾಯಗಳ ಮೇಲಿನ ದೌರ್ಜನ್ಯದಲ್ಲಿ ಏರಿಕೆ | ಕೇಂದ್ರ ಸರ್ಕಾರ

03/02/2021


Provided by

ನವದೆಹಲಿ: 2019 ರಲ್ಲಿ ಎಸ್‌ ಸಿ, ಎಸ್‌ ಟಿ ಸಮುದಾಯದ ಜನರ ಮೇಲಿನ ಅಪರಾಧಗಳು ಕ್ರಮವಾಗಿ ಶೇಕಡಾ 7.3 ಮತ್ತು ಶೇಕಡಾ 26.5 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯ ಸಭೆಗೆ ತಿಳಿಸಿದೆ.

ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ‘ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ವಿರುದ್ಧ ಪ್ರಕರಣಗಳು ಹೆಚ್ಚಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಪೊಲೀಸರು ಮತ್ತು ಸಾರ್ವಜನಿಕ ಕಾನೂನು ವ್ಯವಸ್ಥೆ, ಜೀವ ಮತ್ತು ಆಸ್ತಿ ಸಂರಕ್ಷಣೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ಅಪರಾಧಗಳ ಬಗೆಗಿನ ತನಿಖೆ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದರು.

ಕೇಂದ್ರ ಸರ್ಕಾರವು 1989ರ ಎಸ್‌ ಸಿ, ಎಸ್‌ ಟಿ ವಿರುದ್ಧದ ಅಪರಾಧ ತಡೆ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು 2015ರಲ್ಲಿ ತಿದ್ದುಪಡಿಯನ್ನು ಮಾಡಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ