ಶಾಲಾ ಸಮಯ ಬದಲಾವಣೆ ಸಾಧ್ಯತೆ: ಪೋಷಕರಿಗೆ ಆತಂಕ

ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಶಾಲಾ ಸಮಯದ ಬದಲಾವಣೆ ಬಗ್ಗೆ ಚಿಂತಿಸುವಂತೆ ಹೈಕೋರ್ಟ್ ಸೂಚಿಸಿದೆ. ಇದೀಗ ಶಾಲಾ ಸಮಯ ಬದಲಾವಣೆ ವಿಚಾರ ಮತ್ತೆ ಚರ್ಚೆಗೀಡಾಗಿದೆ.
ಶಾಲಾ ಅವಧಿಯನ್ನು ಬೆಳಗ್ಗೆ 9ರ ಬದಲು ಬೆಳಗ್ಗೆ 8ಕ್ಕೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಾಲಾ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಮುಖಂಡರ ಸಭೆ ಕರೆಯಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಗಣೇಶ ಹಬ್ಬದ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಂಬಂಧಪಟ್ಟವರ ಜೊತೆಗೆ ಸಭೆ ನಡೆಸಲು ನಿರ್ಧರಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದು, ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಶಾಲಾ ಸಮಯ ಬದಲಾವಣೆ ಸಾಧ್ಯತೆ ಹಿನ್ನೆಲೆಯಲ್ಲಿ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಇರುವ ಸಮಯವೇ ಅನುಕೂಲಕರ ಸಮಯವಾಗಿದ್ದು, ಶಾಲಾ ಸಮಯ ಬೇಗ ಆರಂಭಿಸುವುದರಿಂದ ಪೋಷಕರಿಗೆ ಅಷ್ಟೇ ಅಲ್ಲದೇ ಮಕ್ಕಳಿಗೂ ಇದೊಂದು ಹೊರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.