ಶಾಲಾ ವಾಹನ ಡಿಕ್ಕಿ: ಮೆಸ್ಕಾಂ ಉದ್ಯೋಗಿ ಸಾವು - Mahanayaka

ಶಾಲಾ ವಾಹನ ಡಿಕ್ಕಿ: ಮೆಸ್ಕಾಂ ಉದ್ಯೋಗಿ ಸಾವು

accedent
05/03/2022


Provided by

ಬಂಟ್ವಾಳ: ಶಾಲಾ ಬಸ್‌ ಡಿಕ್ಕಿಯಾದ ಪರಿಣಾಮ ಮೆಸ್ಕಾಂ ಉದ್ಯೋಗಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುದ್ಕೋಳಿ ಎಂಬಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡು ನಿವಾಸಿ ಗಣೇಶ್ ಪೂಜಾರಿ ಮೃತಪಟ್ಟ ಮೆಸ್ಕಾಂ ಉದ್ಯೋಗಿ. ಇವರು ಮೆಸ್ಕಾಂನಲ್ಲಿ ಮೀಟರ್ ರೀಡಿಂಗ್ ಉದ್ಯೊಗಿಯಾಗಿದ್ದು, ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಮನೆಗೆ ಹಿಂದಿರುತ್ತಿದ್ದಾಗ ಬಂಟ್ವಾಳದ ಕುದ್ಕೋಳಿ ಎಂಬಲ್ಲಿ ಎದುರಿನಿಂದ ಬಂದ ಶಾಲಾ ಬಸ್ ಬೈಕ್‌ ಗೆ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿದೆ.

ಗಂಭೀರ ಸ್ವರೂಪದ ಗಾಯಗೊಂಡ ಗಣೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಘಟನೆ ಸಂಬಂಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇವಸ್ಥಾನಕ್ಕೆ ಆಗಮಿಸಿದ್ದ ಗರ್ಭಿಣಿ ಕುಸಿದು ಬಿದ್ದು ಸಾವು

ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ಥಳಿಸಿದ ಪಿಎಸ್‍ ಐ

ದರೋಡೆ ಯತ್ನ: ಮೂವರು ಆರೋಪಿಗಳ ಬಂಧನ

ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಗೆ ನೀಡಿದ್ದ ಗನ್‌ ಮ್ಯಾನ್ ಹಿಂಪಡೆದ ಸರಕಾರ

ಮೀನು ವ್ಯಾಪಾರಿ ಮೇಲೆ ತಲವಾರಿನಿಂದ ದಾಳಿ: 2 ಲಕ್ಷ ರೂ. ನಗದು ದರೋಡೆ

 

ಇತ್ತೀಚಿನ ಸುದ್ದಿ