ಭಾರೀ ಮಳೆ: ದೆಹಲಿ, ನೋಯ್ಡಾ, ಗುರುಗ್ರಾಮದಲ್ಲಿ ಶಾಲೆಗಳಿಗೆ ರಜೆ - Mahanayaka
10:19 AM Thursday 18 - December 2025

ಭಾರೀ ಮಳೆ: ದೆಹಲಿ, ನೋಯ್ಡಾ, ಗುರುಗ್ರಾಮದಲ್ಲಿ ಶಾಲೆಗಳಿಗೆ ರಜೆ

10/07/2023

ದೆಹಲಿ, ಗುರುಗ್ರಾಮ್ ಮತ್ತು ನೋಯ್ಡಾದಲ್ಲಿನ ಎಲ್ಲಾ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಗಾಝಿಯಾಬದ್ ನಲ್ಲಿ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ಇನ್ನೂ ಎರಡು ದಿನಗಳವರೆಗೆ ಮತ್ತು ಕನ್ವರ್ ಯಾತ್ರೆಯಿಂದಾಗಿ ಜುಲೈ 17 ರವರೆಗೆ ರಜೆ ಘೋಷಿಸಲಾಗಿದೆ.

ಕನ್ವರ್ ಯಾತ್ರೆಯಿಂದಾಗಿ ಭಾನುವಾರದವರೆಗೆ ಶಾಲೆಗಳಿಗೆ ರಜೆ ಕೊಡುವುದಾಗಿ ಆಡಳಿತವು ಈ ಹಿಂದೆ ಘೋಷಿಸಿತ್ತು.

ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ಉತ್ತರ ಮತ್ತು ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಶನಿವಾರದಿಂದ ಧಾರಾಕಾರ ಮಳೆಯಾಗಿತ್ತು. ಹೀಗಾಗಿ ಜಲಾವೃತ, ಹಠಾತ್ ಪ್ರವಾಹ, ಮನೆ ಕುಸಿತ ಮತ್ತು ಮಾನವ ಸಾವುನೋವುಗಳಿಗೆ ಕಾರಣವಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಗರದ ಶಾಲೆಗಳ ಮುಖ್ಯಸ್ಥರಿಗೆ ನೋಟಿಸ್ ಕಳುಹಿಸಿದ್ದು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಶಿಕ್ಷಕರಿಗೆ ಎಂದಿನಂತೆ ಶಾಲೆಗಳಿಗೆ ಹೋಗಲು ಸೂಚಿಸಲಾಗಿದೆ. ‘ಶುಕ್ರವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿದ ಆರೆಂಜ್ ಅಲರ್ಟ್ ಅನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಜುಲೈ 10 ರಂದು (ಸೋಮವಾರ) ವಿದ್ಯಾರ್ಥಿಗಳಿಗೆ ಮುಚ್ಚಲು ನಿರ್ದೇಶಿಸಲಾಗಿದೆ.

ರಜೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಬೇಕು, ಇದರಿಂದ ಶಿಕ್ಷಕರು ಹೊರಗೆ ಹೋಗಬಾರದು ಎಂದು ಶಿಕ್ಷಣ ನಿರ್ದೇಶನಾಲಯದ (ಡಿಒಇ) ಸುತ್ತೋಲೆಯಲ್ಲಿ ತಿಳಿಸಲಾಗಿದೆ‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ