ಟ್ರಕ್ ನಡಿಗೆ ಸಿಲುಕಿದ ಸ್ಕೂಟರ್: ತಾಯಿ—ಮಗಳು ಅಪಾಯದಿಂದ ಪಾರು!

ಕುಂದಾಪುರ: ಅಪಘಾತದಲ್ಲಿ ಟ್ರಕ್ ನಡಿಗೆ ಸ್ಕೂಟರ್ ಸಿಲುಕಿದರೂ, ಸ್ಕೂಟರ್ ನಲ್ಲಿದ್ದ ತಾಯಿ—ಮಗಳು ಅಪಾಯದಿಂದ ಪಾರಾದ ಘಟನೆ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ ಜಂಕ್ಷನ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಟ್ರಕ್ ನಡಿಗೆ ಸ್ಕೂಟರ್ ಸಿಲುಕಿದ್ದು, ನಜ್ಜುಗುಜ್ಜಾಗಿದೆ. ಸ್ಕೂಟರ್ ನಲ್ಲಿದ್ದ ತಾಯಿ—ಮಗಳು ಸಣ್ಣಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ರೋಸಿ ಮತ್ತು ಆಕೆಯ ಮಗಳು ರೆನಿಸ್ ಅಪಾಯದಿಂದ ಪಾರಾದವರಾಗಿದ್ದಾರೆ. ಸದ್ಯ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರಕ್ ಹರಿಯಾಣದಿಂದ ಕೊಝಿಕೋಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಕುಂದಾಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97