ಗಡಿಜಿಲ್ಲೆಯಲ್ಲಿ ಫ್ಲೆಕ್ಸ್ ಫೈಟ್: ಬಿಜೆಪಿ ಫ್ಲೆಕ್ಸ್ ತೆಗೆಯುವಂತೆ ಎಸ್ ಡಿಪಿಐ, ಬಿಎಸ್ಪಿ ಪ್ರತಿಭಟನೆ - Mahanayaka

ಗಡಿಜಿಲ್ಲೆಯಲ್ಲಿ ಫ್ಲೆಕ್ಸ್ ಫೈಟ್: ಬಿಜೆಪಿ ಫ್ಲೆಕ್ಸ್ ತೆಗೆಯುವಂತೆ ಎಸ್ ಡಿಪಿಐ, ಬಿಎಸ್ಪಿ ಪ್ರತಿಭಟನೆ

bsp sdpi
12/12/2022


Provided by

ಚಾಮರಾಜನಗರ: ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದದ್ಯಾಂತ ಬಿಜೆಪಿ ಬಾವುಟ, ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು ನಗರಸಭೆ ವಿರುದ್ಧ ಇತರೆ ಪಕ್ಷಗಳು ತಿರುಗಿಬಿದ್ದಿವೆ.

ಈ ಹಿಂದೆ ಜಯಂತಿಗಳಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಕಲಾಗಿದ್ದ ಅಭಿನಂದನಾ ಕಟೌಟ್ ಗಳನ್ನು ಚಾಮರಾಜನಗರ ನಗರಸಭೆ ತೆರವು ಮಾಡಿತ್ತು. ಆದರೀಗ, ಸಿಎಂ ಬೊಮ್ಮಾಯಿ ಸ್ವಾಗತಕ್ಕೆ ಹಾಕಿರುವ ಫ್ಲೆಕ್ಸ್ ಗಳ ಬಗ್ಗೆ ಜಾಣ ಕುರುಡು ಪ್ರದರ್ಶನ ಮಾಡಿರುವುದರ ವಿರುದ್ಧ ಎಸ್ ಡಿಪಿಐ, ಬಿಎಸ್ಪಿ ಜಂಟಿಯಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದೆ.

ಜಿಲ್ಲಾಡಳಿತ ಹಾಗೂ ನಗರಸಭೆಯು ಆಡಳಿತ ಪಕ್ಷಕ್ಕೊಂದು ನ್ಯಾಯ, ವಿಪಕ್ಷಗಳಿಗೊಂದು ನ್ಯಾಯ ಎಂಬಂತೆ ವರ್ತಿಸುತ್ತಿದ್ದು ಕೂಡಲೇ ಬಿಜೆಪಿಯವರು ಹಾಕಿರುವ ಫ್ಲೆಕ್ಸ್ ಗಳನ್ನು ತೆರವು ಮಾಡಬೇಕು. ಒಂದು ವೇಳೆ ನಗರಸಭೆ ಸಿಬ್ಬಂದಿ ತೆರವುಗೊಳಿಸದಿದ್ದರೇ ನಾವೇ ಫ್ಲೆಕ್ಸ್ ಗಳನ್ನು ತೆಗೆಯುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸಿಎಂ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಬಾವುಟಗಳು, ರಸ್ತೆಯುದ್ದಕ್ಕೂ ಫ್ಲೆಕ್ಸ್ ಗಳನ್ನು ಅಳವಡಿಸಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು ನಗರಸಭೆ ಮುಂದಿನ ನಡೆ ಕಾದು ನೋಡಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ