ದರ್ಗಾ ವರ್ಸಸ್ ದೇವಾಲಯ ವಿವಾದಕ್ಕೆ ಎಸ್ ಡಿಪಿಐ ಎಂಟ್ರಿ!? - Mahanayaka
12:37 AM Tuesday 21 - October 2025

ದರ್ಗಾ ವರ್ಸಸ್ ದೇವಾಲಯ ವಿವಾದಕ್ಕೆ ಎಸ್ ಡಿಪಿಐ ಎಂಟ್ರಿ!?

darga
14/03/2023

ಚಿಕ್ಕಮಗಳೂರು: ಚುನಾವಣೆ ಹೊತ್ತಿನಲ್ಲೇ ಕಾಫಿನಾಡಲ್ಲಿ ದರ್ಗಾ ವರ್ಸಸ್ ದೇವಾಲಯ ವಿವಾದ ಪ್ರಕರಣ ಮತ್ತೊಮ್ಮೆ ಸದ್ದು ಮಾಡಿದ್ದು, ಇದೀಗ ಈ ವಿವಾದಕ್ಕೆ ಎಸ್ ಡಿಪಿಐ ಎಂಟ್ರಿ ಕೊಟ್ಟಿದೆ.

ದರ್ಗಾ ಕಮಿಟಿ ಸದಸ್ಯರ ಜೊತೆಗೆ ಎಸ್.ಡಿ.ಪಿ.ಐ ಮುಖಂಡರು ಸಭೆ ನಡೆಸಲಿದ್ದಾರೆನ್ನಲಾಗಿದೆ. ವಿವಾದ ಕೇಳಿ ಬಂದಿರುವ ಹಜರತ್ ಸೈಯದ್ ಬೂದ್ ಷಾ ದರ್ಗಾಕ್ಕೆ ಎಸ್.ಡಿ.ಪಿ.ಐ ಮುಖಂಡರು ಭೇಟಿ ನೀಡಲಿದ್ದಾರೆ.

ಕೂದುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಜಿದ್ ನಗರದಲ್ಲಿ ಈ  ದರ್ಗಾ ದರ್ಗಾ ಇದೆ. ಇತ್ತೀಚೆಗೆ ಇದು ದರ್ಗಾವಲ್ಲ ಹಿಂದೂಗಳ ಚಂದ್ರಮೌಳೇಶ್ವರ ದೇವಾಲಯ ಎಂದು ಹಿಂದೂ ಸಂಘಟನೆಯ ಹೆಸರಿನಲ್ಲಿ ವಿವಾದ ಸೃಷ್ಟಿಯಾಗಿದೆ.

ದರ್ಗಾ ದೇವಾಲಯ ವಿವಾದದ ಬೆನ್ನಲ್ಲೇ ಎಸ್.ಡಿ.ಪಿ.ಐ. ಮುಖಂಡರು ಈ ವಿವಾದಕ್ಕೆ ಎಂಟ್ರಿ ನೀಡಿದ್ದಾರೆನ್ನಲಾಗಿದೆ. ನೆನ್ನೆಯಿಂದ ಈ ದರ್ಗಾದಲ್ಲಿ ಉರೂಸ್ ಆರಂಭವಾಗಿದೆ. ಇಂದು ನಡೆಯಲಿರುವ ಉರುಸ್ ಗೆ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ದರ್ಗಾದ ಬಳಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ