ಮಂಗಳೂರಿನವರು ಸ್ಪೀಕರ್ ಆದ ತಕ್ಷಣ ವಿಧಾನ ಸೌಧ ಮುಂದೆ ಸಮುದ್ರ ಬಂದು ಬಿಡ್ತಾ?

ಬೆಂಗಳೂರು: ವಿಧಾನ ಸಭಾ ಸ್ಪೀಕರ್ ಮಂಗಳೂರಿನವರು ಆದ ತಕ್ಷಣ ಸಮುದ್ರ ವಿಧಾನ ಸೌಧ ಮುಂದೆ ಪ್ರತ್ಯಕ್ಷ ಆಗಿ ಬಿಡ್ತಾ? ಅಲ್ಲ, ವಿಧಾನ ಸೌಧ ಮುಂಭಾಗಕ್ಕೆ ಸಮುದ್ರವೇ ಬಂದು ಬಿಡ್ತಾ? ಎಂಬಂತೆ ಭ್ರಮೆಗೊಳಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
“ಬೆಂಗಳೂರಿಗೆ ಬಂದವರು ಈ ವಿಧಾನಸೌಧ ಮತ್ತು ಅದರ ಮುಂದಿರುವ ಸೂಲಿಬೆಲೆ ಚಿನ್ನದ ಬೀಚನ್ನು ತಪ್ಪದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಚಿಂತಕ, ಬರಹಗಾರ ವಿ.ಆರ್.ಕಾರ್ಪೆಂಟರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರಕ್ಕೆ ಖ್ಯಾತ ಪತ್ರಕರ್ತರಾದ ನವೀನ್ ಸೂರಿಂಜೆ ಅವರು ಕಾಮೆಂಟ್ ಮಾಡಿದ್ದು, “ಸ್ಪೀಕರ್ ನಮ್ಮೂರಿನವರು ಆದ ಮೇಲೆ ಕಂಪೌಂಡ್ ತೆಗೆದು ನಮ್ಮೂರಿನ ಸಮುದ್ರ ತಂದಿಟ್ಟಿದ್ದಾರೆ. ಇನ್ನು ಭದ್ರತಾ ಲೋಪ ಆಗಲಿಕ್ಕಿಲ್ಲ” ಎಂದಿದ್ದಾರೆ.
ಸದ್ಯ ಗ್ರಾಫಿಕ್ಸ್ ಗಳು ಕೆಲ ಕ್ಷಣಗಳಲ್ಲೇ ಹೊಸ ಲೋಕವನ್ನೇ ಸೃಷ್ಟಿ ಮಾಡಿ ಬಿಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಅಂತಹ ಗ್ರಾಫಿಕ್ಸ್ ಗಳಲ್ಲಿ ಇದೂ ಒಂದಾಗಿದೆ. ವಿಧಾನ ಸೌಧದ ಮುಂಭಾಗದಲ್ಲಿ ಸಮುದ್ರ ಇರುವ ಫೋಟೋ ನೋಡಿ ಕೆಲ ಕಾಲ ಜನ ದಂಗಾಗುತ್ತಾರೆ. ವಿಧಾನ ಸೌಧದ ಮುಂದೆ ಸಮುದ್ರ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವ ಆನಂದವನ್ನು ಆಸ್ವಾದಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw